ಎಡಮಂಗಲ ಗ್ರಾಮದ ಕಲ್ಲೆಂಬಿ ಉಳ್ಳಾಕ್ಲು ಪುರುಷ ದೈವಸ್ಥಾನವು ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗುತ್ತಿದ್ದು, ಆ ಪ್ರಯುಕ್ತ ಸೆ. 3 ರಂದು ನಡುಬೈಲು ಶಿವಕುಮಾರ್ ಭಟ್ ರವರ ತಂಡದ ನೇತೃತ್ವದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಿತು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಿಶ್ವನಾಥ ಗೌಡ ಕಲ್ಲೆಂಬಿ, ಪದಾಧಿಕಾರಿಗಳು, ಕಲ್ಲೆಂಬಿ ಗ್ರಾಮದ ಕೂಡುಕಟ್ಟಿನ ಗ್ರಾಮಸ್ಥರು, ಕಲ್ಲೆಂಬಿ ದೋಳ ಕಿನ್ನಿದಾರು ಗರಡಿ ಕ್ಷೇತ್ರದ ವಂಶಸ್ಥ ಹಾಗೂ ಯಜಮಾನ ರಾಜಶೇಖರ ಪೂಜಾರಿ ಉಪಸ್ಥಿತರಿದ್ದರು.
(ವರದಿ : ಎ.ಎಸ್.ಎಸ್. ಅಲೆಕ್ಕಾಡಿ)