ಪೆರ್ನ ಪದ್ನಡ್ಕ ನಿಧನ

0

ಯೇನೆಕಲ್ಲು ಗ್ರಾಮದ ಪದ್ನಡ್ಕ ನಿವಾಸಿ ಪೆರ್ನ ಪದ್ನಡ್ಕ ಸೆ. 2ರಂದು ರಾತ್ರಿ ನಿಧನರಾದರು. ಇವರಿಗೆ 85 ವರ್ಷ ವಯಸ್ಸಾಗಿತ್ತು.
ದಿ. ಕೆ.ಎಸ್. ದೇವರಾಜ್ ರವರು ಯೇನೆಕಲ್ಲು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಪೆರ್ನ ಪದ್ನಡ್ಕರವರು ಎರಡು ಅವಧಿಗೆ ಸಂಘದ ನಿರ್ದೇಶಕರಾಗಿಯೂ, ಸುಬ್ರಹ್ಮಣ್ಯ ಗ್ರಾ.ಪಂ.ನ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಅವಿವಾಹಿತರಾಗಿದ್ದ ಇವರು ಸಹೋದರ ಯೇನೆಕಲ್ಲು ಸಹಕಾರಿ ಸಂಘದ ಮಾಜಿ ಸಿಬ್ಬಂದಿ ತಮ್ಮಣ್ಣ ಪದ್ನಡ್ಕ, ಸಹೋದರಿಯರಾದ ಚಂದ್ರಾವತಿ, ಶ್ರೀಮತಿ ಮೋಹಿನಿ, ಶ್ರೀಮತಿ ಪುಷ್ಪಾವತಿ ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.