ಮಹಿಳಾ ಸಮಾಜ ಸ್ಮರಣ ಸಂಚಿಕೆ ಬಿಡುಗಡೆ

0

ಮಹಿಳಾ ಸಮಾಜ (ರಿ.) ಸುಳ್ಯ ಮತ್ತು ಪಯಸ್ವಿನಿ ಯುವತಿ ಮಂಡಲ ಸುಳ್ಯ ಇವರ ಸಹಯೋಗ ದೊಂದಿಗೆ ಮಹಿಳಾ ಸಮಾಜ ಸ್ಮರಣಾ ಸಂಚಿಕೆ ಬಿಡುಗಡೆ ಕಾರ್ಯಕ್ರಮ ಮಹಿಳಾ ಸಮಾಜ ಸಭಾಂಗಣ ಸುಳ್ಯದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಪುಷ್ಪ ರಾಧಾಕೃಷ್ಣ ( ಅಧ್ಯಕ್ಷರು ಮಹಿಳಾ ಸಮಾಜ ಸುಳ್ಯ ) ಇವರು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆ ಹಾಗೂ ಮಹಿಳಾ ಸಮಾಜದ ಸ್ಮರಣಾ ಸಂಚಿಕೆ ಬಿಡುಗಡೆಯನ್ನು ಶ್ರೀಮತಿ‌ರಶ್ಮಿ ಅಶೋಕ ನೆಕ್ರಾಜೆ ( ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳು,ಮಂಗಳೂರು) ಅವರು ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಶ್ರೀಮತಿ ಶೈಲಜಾ ( ಶಿಶು ಅಭಿವೃದ್ಧಿ ಅಧಿಕಾರಿ ಸುಳ್ಯ ) ಹಾಗೂ ಡಾ.ಸಾಯಿಗೀತ ( ಉಪಮುಖ್ಯ ವೈದ್ಯಾಧಿಕಾರಿಗಳು ಉದ್ಯಾನವನ ಆಸ್ಪತ್ರೆ ಕೆ. ಎಫ್.ಡಿ.ಸಿ.ಸುಳ್ಯ) ಹಾಗೂ ಶ್ರೀಮತಿ ಹರಿಣಿ ಸದಾಶಿವ ( ಗೌರವಾಧ್ಯಕ್ಷರು ಮಹಿಳಾ ಸಮಾಜ ಸುಳ್ಯ) , ಹಾಗೂ ಶ್ರೀಮತಿ ನೇತ್ರಾವತಿ ಪಡ್ಡಂಬೈಲು ( ಗೌರವ ಸಲಹೆಗಾರರು ಮಹಿಳಾ ಸಮಾಜ ಸುಳ್ಯ ) ಇವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಶ್ರೀಮತಿ ರಾಧಮಣಿಯವರು ಸ್ಮರಣಾ ಸಂಚಿಕೆಯ ಸಂಪಾದಕೀಯರಾಗಿದ್ದು ಅವರ ಅನುಭವಗಳನ್ನು ಹಂಚಿಕೊಂಡರು .ಶ್ರೀಮತಿ ಪುಷ್ಪ ರಾಧಾಕೃಷ್ಣರವರು ಸ್ವಾಗತಿಸಿ,ಶ್ರೀಮತಿ ಸುಧಾ ಶ್ರೀಧರ್ ವಂದಿಸಿದರು .ಪ್ರಾರ್ಥನೆಯನ್ನು ಕು.ಅನ್ನಪೂರ್ಣರವರು ಮಾಡಿದರು .ಶ್ರೀಮತಿ ಅಶಿತಾ ಕೇಶವರವರು ಕಾರ್ಯಕ್ರಮ ನಿರೂಪಿಸಿದರು.