ಪುತ್ತೂರು: ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದ ಮಹಾಸಭೆ ರೂ. 1.51 ಕೋಟಿ ಲಾಭ, ಶೇ. 15 ಡಿವಿಡೆಂಟ್

0

ಪುತ್ತೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸೆ. 9ರಂದು ಪುತ್ತೂರಿನ ದರ್ಜೆಯಲ್ಲಿರುವ ಪ್ರಶಾಂತ್ ಮಹಲ್ ನಲ್ಲಿ ಸಂಘದ ಅಧ್ಯಕ್ಷ ಸೀತಾರಾಮ ರೈಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘದ ಉಪಾಧ್ಯಕ್ಷ ಎನ್. ಸುಂದರ ರೈ ಸವಣೂರು, ನಿರ್ದೇಶಕರಾದ ಬಿ. ಮಹಾಬಲ ರೈ ಬೋಳಂತೂರು, ಜಯಪ್ರಕಾಶ್ ರೈ ಚೊಕ್ಕಾಡಿ, ಅಶ್ವಿನ್ ಎಲ್. ಶೆಟ್ಟಿ, ಸವಣೂರು, ಎಸ್.ಎಂ. ಬಾಪೂ ಸಾಹೇಬ್, ಸುಳ್ಯ, ಕೆ. ರವೀಂದ್ರನಾಥ ಶೆಟ್ಟಿ ಕೇನ್ಯ, ಯನ್. ರಾಮಯ್ಯ ರೈ ಕೆದಂಬಾಡಿ, ಚಿಕ್ಕಪ್ಪ ನಾಯ್ಕ ಅರಿಯಡ್ಕ, ಸೀತಾರಾಮ ಶೆಟ್ಟಿ ಬಿ. ಮಂಗಳೂರು, ವಿ.ವಿ. ನಾರಾಯಣ ಭಟ್ ನರಿಮೊಗರು, ಜೈರಾಜ್ ಭಂಡಾರಿ ಪುತ್ತೂರು, ಮಹಾದೇವ ಎಂ, ಶ್ರೀಮತಿ ಯಮುನಾ ಎಸ್.ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷ ಸವಣೂರು ಕೆ. ಸೀತಾರಾಮ ರೈ ಸ್ವಾಗತಿಸಿದರು. ಸಂಘದ ಕೇಂದ್ರ ಕಚೇರಿ ವ್ಯವಸ್ಥಾಪಕರಾದ ಸುನಾದ್ ರಾಜ್ ಶೆಟ್ಟಿ ಲಾಭಾಂಶ ವಿಂಗಡನೆಯನ್ನು ಓದುತ್ತಾ ಸಂಘದವು 2022-23ನೇ ಸಾಲಿನಲ್ಲಿ ಸಂಘ ರೂ. 1,51,06,604 ನಿವ್ವಳ ಲಾಭಗಳಿಸಿದ್ದು, ಶೇ. 15 ಡಿವಿಡೆಂಟ್ ವಿತರಿಸಲಿದೆ ಎಂದರು. ಸಂಘದ ಮಹಾಪ್ರಬಂಧಕರಾದ ವಸಂತ ಜಾಲಾಡಿ ವಾರ್ಷಿಕ ವರದಿ ವಾಚಿಸಿದರು. ಸಂಘದ ಮಾರಾಟಾಧಿಕಾರಿ ಶ್ರೀಧರ ಪೂಜಾರಿ ಅಂದಾಜು ಆಯ-ವ್ಯಯ ಪಟ್ಟಿ ವಾಚಿಸಿದರು. ವರದಿ ಸಾಲಿನಲ್ಲಿ ಬಜೆಟ್ ಗಿಂತ ಹೆಚ್ಚು ಖರ್ಚಾದ ವೆಚ್ಚವನ್ನು ವಾಚಿಸಿದರು. ವಾರ್ಷಿಕ ಸಭೆಯ ತಿಳುವಳಿಕೆ ಪತ್ರವನ್ನು ಬೊಳುವಾರು ಶಾಖೆಯ ವ್ಯವಸ್ಥಾಪಕಿ ದಯಾಕಾಂತಿ ಓದಿದರು. ಸಿಬ್ಬಂದಿ ರಕ್ಷಾ ಡಿ.ಜೆ ಪ್ರಾರ್ಥಸಿದರು. ಸಾಲೆತ್ತೂರು ಶಾಖೆಯ ವ್ಯವಸ್ಥಾಪಕರಾದ ವಿನೋದ್ ವಂದಿಸಿದರು. ವಾರ್ಷಿಕವಾಗಿ ಹೆಚ್ಚು ವ್ಯವಹಾರ ನಡೆಸಿ ಕುಂಬ್ರ ಶಾಖೆಗೆ ಪ್ರಥಮ, ಸವಣೂರು ಶಾಖೆಗೆ ದ್ವಿತೀಯ ಮತ್ತು ಸುಳ್ಯ ಶಾಖೆಗೆ ತೃತೀಯ ಬಹುಮಾನ, ಪ್ರಶಸ್ತಿ ಮತ್ತು ಟ್ರೋಫಿ ನೀಡಿ ಈ ಸಂದರ್ಭದಲ್ಲಿ ಗೌರವಿಸಲಾಯಿತು. ಸುಳ್ಯ ಶಾಖಾ ವ್ಯವಸ್ಥಾಪಕರಾದ ಮನೋಜ್ ಕುಮಾರ್ ಕೆ.ಎನ್, ಸಿಬ್ಬಂದಿಗಳಾದ ಶ್ರೀದೇವಿ, ಅಕ್ಷತಾ ಪಿ, ಪ್ರಿಯಾ ಬಿ.ವಿ, ದೀಕ್ಷಿತ್ ರಾವ್, ಚಂದ್ರಶೇಖರ್ ಬಹುಮಾನ‌ ಸ್ವೀಕರಿಸಿದರು.