ಜಿದ್ದಾಜಿದ್ದಿನಿಂದ ನಡೆದ ಬೆಳ್ಳಾರೆ ಝಕರಿಯಾ ಜುಮ್ಮಾ ಮಸೀದಿ ಆಡಳಿತ ಮಂಡಳಿ ಚುನಾವಣೆ

0

460 ಸದಸ್ಯರಲ್ಲಿ 411 ಮಂದಿಯಿಂದ ಮತಚಲಾವಣೆ

ಬೆಳ್ಳಾರೆ ಝಕರಿಯಾ ಜುಮ್ಮಾ ಮಸೀದಿ ಆಡಳಿತ ಮಂಡಳಿಗೆ ಇಂದು ಬೆಳಿಗ್ಗೆಯಿಂದ ನಡೆದ ಚುನಾವಣೆ ಜಿದ್ದಾಜಿದ್ದಿಯಿಂದ ನಡೆಯಿತು.
ಬೆಳಿಗ್ಗೆಯಿಂದ ಸಂಜೆ 3 ಗಂಟೆಯ ವರೆಗೆ ಚುನಾವಣೆಯಲ್ಲಿ ಜಮಾಅತಿನ 460 ಸದಸ್ಯರಲ್ಲಿ 411 ಮಂದಿ ಮತ ಚಲಾಯಿಸಿದ್ದಾರೆ.


ಪೊಲೀಸ್ ಭದ್ರತೆಯೊಂದಿಗೆ ಚುನಾವಣೆ ನಡೆದಿದ್ದು ಸಂಜೆ 4 ಗಂಟೆಗೆ ಆರಂಭಗೊಂಡಿರುವ ಮತಎಣಿಕೆ ಕೊಠಡಿಯ ಹೊರಗಡೆ ನೂರಾರು ಜನರು ಸೇರಿದ್ದಾರೆ.
ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.