ಪಂಜ ಗ್ರಾ.ಪಂ.ನಲ್ಲಿ ಕೊರಗರ ವಿಶೇಷ ಗ್ರಾಮ ಸಭೆ

0

ಪಂಜ ಗ್ರಾ.ಪಂ.ನಲ್ಲಿ ಕೊರಗರ ವಿಶೇಷ ಗ್ರಾಮ ಸಭೆಯು ಸೆ.8 ರಂದು ಪಂಜ ಗ್ರಾ.ಪಂ.ಸಭಾಭವನದಲ್ಲಿ ನಡೆಯಿತು.
ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಸಭಾಧ್ಯಕ್ಷತೆ ವಹಿಸಿದ್ದರು. ಸಮಾಜ ಕಲ್ಯಾಣ ಇಲಾಖೆಯ ಗ್ರೇಡ್ ೨ ಸಹಾಯಕ ನಿರ್ದೇಶಕರಾದ ಆರ್ಶಿಯಾ ನೋಡೆಲ್ ಅಧಿಕಾರಿಯಾಗಿದ್ದರು.


ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರು, ಕೊರಗರ ಸಂಘದ ಅಧ್ಯಕ್ಷ ಸುಂದರ ಮಂಗಳೂರು, ಗ್ರಾಮ ಕರಣಿಕರು, ಬೀಟ್ ಪೊಲೀಸ್, ಆರೋಗ್ಯ ಕೇಂದ್ರದ ಎಎನ್‌ಎಂ., ಉಪಸ್ಥಿತರಿದ್ದರು.
ಕೊರಗರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ತಕ್ಷಣ ಸ್ಪಂದಿಸುವುದಾಗಿ ಹೇಳಿದರು. ಗ್ರಾ.ಪ.ಸದಸ್ಯೆ ಶ್ರೀಮತಿ ನೇತ್ರಾವತಿ ಕಲ್ಲಾಜೆ ವಂದಿಸಿದರು.