ಗಣೇಶೋತ್ಸವ,ಈದ್ ಮಿಲಾದ್ ಹಬ್ಬದ ಹಿನ್ನೆಲೆ : ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಶಾಂತಿಸಭೆ

0

ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಶ್ರೀ ಗಣೇಶೋತ್ಸವ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಾಂತಿ ಸಭೆಯು ಸೆ.15 ರಂದು ನಡೆಯಿತು.
ಸುಳ್ಯ ವೃತ್ತ ನಿರೀಕ್ಷ ನವೀನ್ ಚಂದ್ರ ಜೋಗಿಯವರು ಮಾತನಾಡಿ ಗಣೇಶೋತ್ಸವ ಹಬ್ಬವನ್ನು ಇಲಾಖೆಯ ಅನುಮತಿಯೊಂದಿಗೆ ಆಚರಿಸಬೇಕು.ಗಣೇಶನ ಮೂರ್ತಿಯನ್ನು ವಿವಾದಿತ ಸ್ಥಳದಲ್ಲಿ ಸ್ಥಾಪನೆ ಮಾಡಬಾರದು.
ಸಾರ್ವಜನಿಕರಿಗೆ ತೊಂದರೆಯಾಗುವ ಸ್ಥಳದಲ್ಲಿ ಕಾರ್ಯಕ್ರಮ ನಡೆಸಬಾರದು.ಶಾಂತಿಯುತವಾಗಿ ಹಬ್ಬವನ್ನು ನಡೆಸಬೇಕು.ಅಗ್ನಿಶಾಮಕ ದಳ,ತುರ್ತು ಚಿಕಿತ್ಸಾ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು.


ರಾತ್ರಿ 10 ಗಂಟೆಯೊಳಗೆ ಕಾರ್ಯಕ್ರಮವನ್ನು ಮುಗಿಸಬೇಕು ಎಂದು ಮೇಲಾಧಿಕಾರಿಗಳ ಸುತ್ತೋಲೆಯಲ್ಲಿರುವ ಮಾಹಿತಿಯನ್ನು ನೀಡಿದರು.
ಶೋಭಾಯಾತ್ರೆಯ ಸಂದರ್ಭದಲ್ಲಿ ಡಿಜೆಯನ್ನು ಹಾಕುವಂತಿಲ್ಲ.ಹೆಚ್ಚು ಸೌಂಡ್ ಧ್ವನಿವರ್ಧಕ ಬಳಸಬಾರದು ಎಂದು ಹೇಳಿದರು.
ಈದ್ ಮಿಲಾದ್ ಹಬ್ಬವನ್ನು ಕೂಡಾ ಶಾಂತಿ,ಸೌಹಾರ್ದತೆಯಿಂದ ನಡೆಸಬೇಕು ಎಂದು ಹೇಳಿದರು.ಯಾವುದೇ ತೊಂದರೆಗಳು,ಸಮಸ್ಯೆಗಳು ಆದರೆ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಅವರು ತಿಳಿಸಿದರು.
ಠಾಣೆಯ ತನಿಖಾ ಎಸ್.ಐ.ಅಶೋಕ್ ಸ್ವಾಗತಿಸಿದರು.


ಎಸ್.ಐ.ಸಂತೋಷ್ ಬಿ.ಪಿ.ಉಪಸ್ಥಿತರಿದ್ದು ಮಾತನಾಡಿದರು.
ಸಭೆಯಲ್ಲಿ ಧಾರ್ಮಿಕ ಮುಖಂಡರು,ಸಂಘ ಸಂಸ್ಥೆಗಳ ಪದಾಧಿಗಳು ಉಪಸ್ಥಿತರಿದ್ದರು.