ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ

0

ರೂ. 61.69 ಲಕ್ಷ ನಿವ್ವಳ ಲಾಭ,ಶೇ.9 ಡಿವಿಡೆಂಡ್

ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಶ್ರೀರಾಮ ಪಾಟಾಜೆಯವರ ಅಧ್ಯಕ್ಷತೆಯಲ್ಲಿ ಸೆ.17 ರಂದು ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಿ. ವಿಜಯ ರೈ ವರದಿ ಮಂಡಿಸಿದರು.


ಸಂಘದ ಅಧ್ಯಕ್ಷ ಶ್ರೀರಾಮ ಪಾಟಾಜೆಯವರು ಮಾತನಾಡಿ ಸಂಘವು ವರದಿ ವರ್ಷದಲ್ಲಿ 262.29 ಕೋಟಿ ವ್ಯವಹಾರ ನಡೆಸಿ 61,69,784.77 ರೂ ನಿವ್ವಳ ಲಾಭ ಗಳಿಸಿರುತ್ತದೆ.ಸದಸ್ಯರಿಗೆ ಶೇ.9 ಡಿವಿಡೆಂಡ್ ನೀಡಲಾಗುವುದು ಎಂದು ಹೇಳಿದರು.

ಕ್ಯಾಂಪ್ಕೋ ಅಡಿಕೆ ಖರೀದಿ ಕೇಂದ್ರ ಪ್ರಾರಂಭಮಾಡುವ ಬಗ್ಗೆ ಐತ್ತಪ್ಪ ರೈಯವರು ಹೇಳಿದರು.
ಕೊಡಿಯಾಲದಲ್ಲಿ ಸಹಕಾರಿ ಸಂಘದ ಹೊಸ ಕಟ್ಟಡ ನಿರ್ಮಾಣವಾಗಿದ್ದು ಯಾವಾಗ ಉದ್ಘಾಟನೆ ಎಂದು ಕೆ.ಕೆ.ನಾಯ್ಕ್ ಕೇಳಿದರು.ಇದಕ್ಕೆ ಅಧ್ಯಕ್ಷರು ಗ್ರಾಮ ಪಂಚಾಯತ್ ಸಹಕಾರ ಪಡೆದುಕೊಂಡು ಕೂಡಲೇ ಪ್ರಾರಂಭಮಾಡುವುದಾಗಿ ತಿಳಿಸಿದರು.


ಗಂಗಾಧರ ರೈ ಪುಡ್ಕಜೆಯವರು ಅಡಿಕೆ ದಾಸ್ತಾನು ಗೋದಾಮು ಬಗ್ಗೆ ಕೇಳಿದರು.ಇದಕ್ಕೆ ಅಧ್ಯಕ್ಷರು ಅದನ್ನು ರಿಪೇರಿ ಮಾಡಲಾಗಿದೆ.ಗೆದ್ದಲು ಬರದಂತೆ ವ್ಯವಸ್ಥೆ ಮಾಡಲಾಗಿದೆ ಮುಂದಕ್ಕೆ ಅಡಿಕೆ ದಾಸ್ತಾನು ಇಡಬಹುದು ಎಂದು ಹೇಳಿದರು.

ಸನ್ಮಾನ

ಸಂಘದಲ್ಲಿ ಸೇವೆ ನಿವೃತ್ತರಾದ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಕೆ.ಸುಬ್ರಹ್ಮಣ್ಯ ದಂಪತಿ, ಈಶ್ವರ ಆಳ್ವ ದಂಪತಿ,ಲೇಖಪಾಲ ಎಂ.ದಿವಾಕರ ರೈ ಮತ್ತು ಗುಮಾಸ್ತ ಜತ್ತಪ್ಪ ಕೆ.ದಂಪತಿಗಳನ್ನು ಸಂಘದ ವತಿಯಿಂದ ಶಾಲು ಹೊದಿಸಿ,ಫಲ,ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
10 ನೇ ಯರಗತಿಯಲ್ಲಿ ಶೇ.85 ಕ್ಕಿಂತ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು ಮತ್ತು ವಿದ್ಯಾರ್ಥಿ ವೇತನ ನೀಡಲಾಯಿತು.


ವೇದಿಕೆಯಲ್ಲಿ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಕೆ., ನಿರ್ದೇಶಕರಾದ ಬಿ.ಕರುಣಾಕರ ಆಳ್ವ ಬೇರ್ಯ, ರಮೇಶ್ ಮಾರ್ಲ ಎಂ.ಮರಿಕೇಯಿ, ವಿಠಲದಾಸ್ ಎನ್.ಎಸ್.ಡಿ, ಹರೀಶ್ ಬೊಳಿಯಮೂಲೆ, ಲಕ್ಷ್ಮಣ ಬಿ.ಜಿ.ಪೆರುವಾಜೆ, ಶ್ರೀಮತಿ ಶಾರದಾ ರೈ ಕೊರಂಗಾಜೆ, ಶ್ರೀಮತಿ ನಿರ್ಮಲ ರೈ ಕೆಡೆಂಜಿಮೊಗ್ರು, ಶ್ರೀಮತಿ ಸಾವಿತ್ರಿ ಚಾಮುಂಡಿಮೂಲೆ, ಸುಂದರ ಕೆ.ಜೆ.ಪೋಳಾಜೆ ಉಪಸ್ಥಿತರಿದ್ದರು.