ಆಲೆಟ್ಟಿ ರಸ್ತೆಯ ನಾಗಪಟ್ಟಣ ಗೆಸ್ಟ್ ಹೌಸ್ ಬಳಿ ಕಾಡಾನೆಗಳ ಹಿಂಡು ಪ್ರತ್ಯಕ್ಷ -ವೀಡಿಯೋ ವೈರಲ್

0

ಆಲೆಟ್ಟಿ ಮುಖ್ಯ ರಸ್ತೆಯಲ್ಲಿ ನಾಗಪಟ್ಟಣ ವಿಶ್ರಾಂತಿ ಗೃಹದ ಬಳಿಯಲ್ಲಿ ಕಳೆದ ರಾತ್ರಿ ವೇಳೆಯಲ್ಲಿ ಕಾಡಾನೆಗಳ ಹಿಂಡು ಕಂಡು ಬಂದಿದೆ.

ಸುಮಾರು 5-6 ಆನೆಗಳು ರಸ್ತೆ ಬದಿಯ ಕೆ.ಎಫ್.ಡಿ.ಸಿ ರಬ್ಬರ್ ತೋಟದಲ್ಲಿ ಪ್ರತ್ಯಕ್ಷವಾಗಿದೆ. ಸ್ಥಳೀಯ ರು ಸೇರಿ ಟಾರ್ಚ್ ಬೆಳಕು ಹಾಕಿ ಮೊಬೈಲ್ ಮೂಲಕ ವೀಡಿಯೋ ಮಾಡಿದರು.


ಅಲ್ಲೇ ಪಕ್ಕದಲ್ಲಿ ಹೊಳೆ ಬದಿಯಲ್ಲಿ ಮನೆಗಳು ಇರುವುದರಿಂದ ಪರಿಸರದ ನಿವಾಸಿಗಳು ರಾತ್ರಿ ಸಮಯದಲ್ಲಿ ಭಯದಿಂದ ಕಾಲ ಕಳೆದರು. ರಸ್ತೆಯ ಲ್ಲಿ ರಾತ್ರಿ ಸಂಚರಿಸುವ ವಾಹನ ಸವಾರರು ಎಚ್ಚರ ವಹಿಸಬೇಕಾಗಿದೆ.