ಅಡ್ಕಾರು: ಅರುಣ್ ಕುಮಾರ್ ಪುತ್ತಿಲರಿಂದ ಟೀಂ ಸ್ಕಂದ ತಂಡದ ನೂತನ ಜೆರ್ಸಿ ಬಿಡುಗಡೆ

0

ಜಾಲ್ಸೂರು ಗ್ರಾಮದ ಅಡ್ಕಾರುಪದವಿನ ಟೀಂ ಸ್ಕಂದ ತಂಡದ ನೂತನ ಜೆರ್ಸಿಯನ್ನು ಅರುಣ್ ಕುಮಾರ್ ಪುತ್ತಿಲ ಅವರು ಸೆ.17ರಂದು ಬಿಡುಗಡೆಗೊಳಿಸಿದರು.

ಸುಳ್ಯಕ್ಕೆ ಕಾರ್ಯಕ್ರಮ ನಿಮಿತ್ತ ಬಂದಿದ್ದ ಅರುಣ್ ಕುಮಾರ್ ಪುತ್ತಿಲರು ಅಡ್ಕಾರುಪದವಿಗೆ ಭೇಟಿ ನೀಡಿ ಜೆರ್ಸಿ ಬಿಡಗಡೆಗೊಳಿಸಿದರು.
ಟೀಂ ಸ್ಕಂದ ತಂಡದ ಸದಸ್ಯರು ಸೆ.17ರಂದು ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಸ್ವಚ್ಛತಾ ಕಾರ್ಯ ನಡೆಸಿದರು. ಈ ಸಂದರ್ಭದಲ್ಲಿ ಟೀಂ ಸ್ಕಂದ ತಂಡದ ಪದಾಧಿಕಾರಿಗಳು ಉಪಸ್ಥಿತರಿದ್ದರು.