ಸೆ. 19: ಬಳ್ಪ ಗ್ರಾಮದ ಪಾದೆಯಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ

0

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪಾದೆ ಇದರ ಆಶ್ರಯದಲ್ಲಿ ಪಾದೆ ಬಸ್ಸು ನಿಲ್ದಾಣದ ಬಳಿಯಲ್ಲಿ
22ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ. 19ರಂದು ಜರಗಲಿದೆ. ಬೆಳಿಗ್ಗೆ 9.00 ಗಂಟೆಗೆ ಗಣಪತಿಯ ಪ್ರತಿಷ್ಠೆ ಬಳಿಕ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಕೇನ್ಯ ಮತ್ತು ಶ್ರೀ ಧರ್ಮಶಾಸ್ತಾ ಭಜನಾ ಮಂಡಳಿ ಬಳ್ಪ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 12.00 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಅಪರಾಹ್ನ 3.00 ಗಂಟೆಗೆ ಕುಣಿತ ಭಜನೆಯೊಂದಿಗೆ ಗಣಪತಿಯ ಶೋಭಾಯಾತ್ರೆ ನಡೆದು ಜಲಸ್ಥಂಭನ ನಡೆಯಲಿದೆ. ಸಮಿತಿಯ ಅಧ್ಯಕ್ಷರಾಗಿ ಪ್ರಕಾಶ್ ಆಚಾರ್ ನರಿಯಂಗ, ಕಾರ್ಯದರ್ಶಿಯಾಗಿ ಸುಧಾಕರ ರೈ ಪಡ್ಕೊಟ್ಟು ಮತ್ತು ಖಜಾಂಚಿಯಾಗಿ ಮೋನಪ್ಪ ಕೋಡಿಮನೆ ಕಾರ್ಯನಿರ್ವಹಿಸುತ್ತಿದ್ದಾರೆ.