ಸುಳ್ಯದಲ್ಲಿ 55 ನೇ ವರ್ಷದ ಗಣೇಶೋತ್ಸವ ಉದ್ಘಾಟನೆ

0

ಗಣೇಶನ ಆರಾಧನೆಯಿಂದ ಜ್ವಾಲಾಮುಖಿ ಶಮನಗೊಂಡ ಇತಿಹಾಸವಿದೆ- ಡಾ.ಕೆ.ವಿ.ಚಿದಾನಂದ

ಗಣೇಶನ ಹಬ್ಬ ಜಾತಿ ಮತವೆಂಬ ಭೇದವಿಲ್ಲದೆ ಆಚರಿಸಲ್ಪಡುವ ಮಹಾನ್ ಹಬ್ಬವಾಗಿದೆ. ಬಾಲಗಂಗಾಧರನಾಥ ತಿಲಕರು ಸ್ವಾತಂತ್ರ್ಯ ಹೋರಾಟದ ಸಂದರ್ಭ ರಾಜಕೀಯ ಸಭೆ ನಡೆಸದಂತೆ ಬ್ರಿಟಿಷರು ಕಾನೂನು ನಿರ್ಬಂಧ ಹೇರಿದಾಗ ಗಣೇಶೋತ್ಸವದ
ಮೂಲಕ ಅದಕ್ಕೆ ನಾಂದಿ ಹಾಡಿದವರು ಎಂದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಉತ್ಸವವನ್ನು ಉದ್ಘಾಟಿಸಿ ಡಾ.ಕೆ.ವಿ.ಚಿದಾನಂದರು ಮಾತನಾಡಿದರು.

ಸುಳ್ಯ ಸಿದ್ದಿವಿನಾಯಕ ಸೇವಾ ಸಮಿತಿ ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ ಆಶ್ರಯದಲ್ಲಿ ನಡೆದ
55 ನೇ ವರ್ಷದ ಗಣೇಶೋತ್ಸವವನ್ನು ಉದ್ಘಾಟಿಸಿದರು.

ಇಂಡೋನೇಷ್ಯಾದಲ್ಲಿಯೂ ಕರೆನ್ಸಿ ನೋಟಿನಲ್ಲಿ ಗಣೇಶನ ಪ್ರತಿರೂಪ ಮುದ್ರಿಸಲಾಗಿತ್ತು. ಇತ್ತೀಚೆಗೆಜ್ವಾಲಾಮುಖಿಯ ಜ್ವಾಲೆಯನ್ನು
ಹಿಂದೂ ಅರ್ಚಕರ ನಿರ್ದೇಶನದಂತೆ ಅಲ್ಲಿದ್ದ ಗಣಪತಿ ಮೂರ್ತಿಗೆ ಪೂಜೆ ಸಲ್ಲಿಸುವ ಮುಖಾಂತರ ಶಮನಗೊಳಿಸಲಾಯಿತು. ಸುಳ್ಯದಲ್ಲಿ
ಗಣೇಶನ ಮಂದಿರ ನಿರ್ಮಾಣ ಕಾರ್ಯ ಶೀಘ್ರವಾಗಿ ಈಡೇರುವಂತಾಗಲಿ ಎಂದು ಶುಭಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿ ಅಧ್ಯಕ್ಷ ಉಮೇಶ್ ಪಿ.ಕೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಒಡಬಾಯಿ ಕಸ್ತೂರಿ ನರ್ಸರಿ ಮಾಲಕ ಮಧುಸೂದನ್ ಕುಂಭಕೋಡು, ದೇವತಾರಾಧನಾ ಸಮಿತಿ ಅಧ್ಯಕ್ಷ ಸೋಮನಾಥ ಕೆ, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿಲತಾಮಧುಸೂದನ್, ಕಾರ್ಯದರ್ಶಿ ಶಶಿಧರ ಕೊಯಿಕುಳಿ, ದಾಮೋದರ ಮಂಚಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀಮತಿ ಲತಾಶ್ರೀಸುಪ್ರಿತ್ ಮೋಂಟಡ್ಕ ಕಾರ್ಯಕ್ರಮ ನಿರೂಪಿಸಿದರು.