ಹಳೆಗೇಟು : ರಸ್ತೆ ದಾಟುತಿದ್ದ ವ್ಯಕ್ತಿಗೆ ಕಾರು ಗುದ್ದಿ ಗಾಯ – ಆಸ್ಪತ್ರೆಗೆ ದಾಖಲು

0

ಹಳೆಗೇಟಿನಲ್ಲಿ ರಸ್ತೆ ದಾಟಿದ ವ್ಯಕ್ತಿಗೆ ಕಾರೊಂದು ಗುದ್ದಿದ ಪರಿಣಾಮ, ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡ ಘಟನೆ ಸೆ.20 ರಂದು ರಾತ್ರಿ ವರದಿಯಾಗಿದೆ.

ಹಳೆಗೇಟಿನಲ್ಲಿ ಗಣೇಶೋತ್ಸವ ಕಾರ್ಯಕ್ರಮಕ್ಕೆಂದು ದೊಡ್ಡೇರಿಯ‌ ಮೋಹನ ಎಂಬವರು ‌ಬಂದಿದ್ದರು. ಸುಮಾರು 11 ಗಂಟೆ ವೇಳೆಗೆ ಅವರು‌ ಮನೆಗೆ ಹೋಗಲು ಹೊರಟು‌ ರಸ್ತೆಯ ಬದಿಯಿಂದ ಇನ್ನೊಂದು‌ ಬದಿಗೆ ದಾಟುವ ಸಂದರ್ಭ ಕಾರೊಂದು‌ ಬಂದು ಢಿಕ್ಕಿ ಯಾಯಿತು. ಪರಿಣಾಮ ಮೋಹನರು ರಸ್ತೆಗೆ ಎಸೆಯಲ್ಪಟ್ಟರು. ಅವರ ದವಡೆ, ಹಣೆಗೆ ಗಾಯವಾಗಿದ್ದು, ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.