ಕರಾಟೆಯಲ್ಲಿ ಶಮಂತ್ ಪೆರುಮುಂಡ ಜಿಲ್ಲಾ ಮಟ್ಟದಲ್ಲಿ ತೃತೀಯ

0

ಸಾರ್ವಜನಿಕ ಶಿಕ್ಷಣ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸುಳ್ಳದ ಸೈಂಟ್ ಜೋಸೆಫ್ ಪ್ರಾಥಮಿಕ ಶಾಲೆಯ ಶಮಂತ್ 7ನೇ ತರಗತಿಯ ವಿದ್ಯಾರ್ಥಿ ತೃತೀಯ ಬಹುಮಾನವನ್ನು ಪಡೆದುಕೊಂಡಿರುತ್ತಾನೆ.

ಈತ ಜಾಲ್ಸೂರಿನ ದಿ. ಮೋಹನ ಪೆರುಮುಂಡ ಹಾಗೂ ಸವಿತಾ ದಂಪತಿಗಳ ಪುತ್ರ.

ಕರಾಟೆ ಶಿಕ್ಷಕ ಚಂದ್ರಶೇಖರ ಕನಕ ಮಜಲು ಇವರ ಶಿಷ್ಯ.

ವಿದ್ಯಾಸಂಸ್ಥೆಯ ಸಂಚಾಲಕರಾದ ವಿಕ್ಟರ್ ಡಿ ಸೋಜ, ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಬಿನೋಮ, ದೈಹಿಕ ಶಿಕ್ಷಣ ಶಿಕ್ಷಕರುಗಳಾದ ಕೊರಗಪ್ಪ ಬೆಳ್ಳಾರೆ ಹಾಗೂ ಪುಷ್ಪವೇಣಿ ಸಹಕರಿಸಿದರು.