ಬೆಳ್ಳಾರೆ ಝಕರಿಯ್ಯಾ ಜುಮಾ ಮಸೀದಿ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಯು ಎಚ್ ಅಬೂಬಕ್ಕರ್ (ಮಂಗಳ), ಉಪಾಧ್ಯಕ್ಷರಾಗಿ ಹಾಜಿ ಅಬ್ದುಲ್ ಖಾದರ್ ಬಾಯಂಬಾಡಿ ಆಯ್ಕೆ

0

ಬೆಳ್ಳಾರೆ ಝಖರಿಯ್ಯಾ ಜುಮಾ ಮಸೀದಿ ನೂತನ ಆಡಳಿತ ಸಮಿತಿಯ ಆಯ್ಕೆ ಇಂದು ಮಂಗಳೂರು ವಖ್ಫ್ ಇಲಾಖಾ ಕಚೇರಿಯಲ್ಲಿ ನಡೆಯಿತು.
ನೂತನ ಸಮಿತಿ ಆಯ್ಕೆಯ ನೇತೃತ್ವವನ್ನು ವಖ್ಫ್ ಇಲಾಖೆಯ ಅಧಿಕಾರಿ ವಹಿಸಿದ್ದರು.
ಮಸೀದಿಯ ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಯು ಎಚ್ ಅಬೂಬಕರ್ (ಮಂಗಳ), ಉಪಾಧ್ಯಕ್ಷರಾಗಿ ಹಾಜಿ ಅಬ್ದುಲ್ ಖಾದರ್ ಬಯಂಬಾಡಿ, ಕೋಶಾಧಿಕಾರಿಯಾಗಿ ಅಬ್ದುನ್ನಾಸಿರ್ ಯು, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರೆಹಮಾನ್ ಕೆ, ಕಾರ್ಯದರ್ಶಿಯಾಗಿ ಅಝರುದ್ದಿನ್,ಅವಿರೋಧವಾಗಿ ಆಯ್ಕೆಯಾದರು.
ಸದಸ್ಯರುಗಳಾಗಿ ಹಮೀದ್ಎಚ್ಎಂ, ಹನೀಫ್ ಎನ್, ಇಸ್ಮಾಯಿಲ್ ಬಿ,ಹಸೈನಾರ್ ಬಿ, ಹಮೀದ್ ಕೆ ಎಂ, ಅಬ್ದುಲ್ ಬಶೀರ್ ಕೆ ಇವರು ಆಯ್ಕೆಯಾದರು.