ವೇದಾಂತ್ ರೈ ಪೇರಾಲುಗುತ್ತು ವೈದ್ಯಕೀಯ ಶಿಕ್ಷಣಕ್ಕೆ ಆಯ್ಕೆ

0

2022-23ನೇ ಸಾಲಿನ ನೀಟ್ ಪರೀಕ್ಷೆಯಲ್ಲಿ ವೇದಾಂತ್ ರೈ 635(11795AIR)ಅಂಕ ಪಡೆದು ಸರಕಾರಿ ಕೋಟಾ ದಲ್ಲಿ
ಬೆಂಗಳೂರಿನ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ಎಮ್. ಬಿ. ಬಿ.ಎಸ್. ಶಿಕ್ಷಣಕ್ಕೆ ಪ್ರವೇಶ ಪಡೆದಿರುತ್ತಾರೆ.


ಇವರು ಸುಳ್ಯದ ರೋಟರಿ ವಿದ್ಯಾ ಸಂಸ್ಥೆ, ಪುತ್ತೂರಿನ ಅಂಬಿಕಾ ವಿದ್ಯಾಲಯ ಮತ್ತು ಮೂಡಬಿದ್ರೆಯ ಆಳ್ವಾಸ್ ನೀಟ್ ಅಕಾಡೆಮಿಯಲ್ಲಿ ಶಿಕ್ಷಣವನ್ನು ಪಡೆದಿರುತ್ತಾರೆ.ಇವರು ಮಂಡೆಕೋಲು ಗ್ರಾಮದ ಪೇರಾಲುಗುತ್ತು ನಾಗರಾಜ ರೈ ಮತ್ತು ಮಮತಾ ರೈ ದಂಪತಿಗಳ ಪುತ್ರ.