ಸೆಲ್ಕೋ ಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸುಳ್ಯ ಶಾಖೆಗೆ ಪ್ರಶಸ್ತಿ

0

ಸೆಲ್ಕೋ ಸಂಸ್ಥೆಯ 2022-23 ನೇ ಸಾಲಿನ ರಾಜ್ಯಮಟ್ಟದ ವಾರ್ಷಿಕೋತ್ಸವ ಕಾರ್ಯಕ್ರಮವು ಸೆಪ್ಟೆಂಬರ್ 15 ರಂದು ಚಿಕ್ಕಮಗಳೂರಿನ ಸಿಲ್ವರ್ ಸ್ಕೈ ರೆಸಾರ್ಟ್ ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸುಳ್ಯ ಶಾಖೆಗೆ ಗ್ರಾಹಕ ಸೇವಾ ವಿಶೇಷ ಮೆಚ್ಚುಗೆ ಪ್ರಶಸ್ತಿ ಲಭಿಸಿದ್ದು, ಸೆಲ್ಕೋ ಸುಳ್ಯ ಶಾಖಾ ವ್ಯವಸ್ಥಾಪಕರಾದ ಆಶಿಕ್ ಬಸವನಪಾದೆ ಅವರು ಪಡೆದುಕೊಂಡರು. ಈ ಪ್ರಶಸ್ತಿ ಗ್ರಾಹಕರಿಗೆ ಬ್ಯಾಂಕಿನ ಆರ್ಥಿಕ ಸಹಕಾರದೊಂದಿಗೆ ಸ್ವಉದ್ಯೋಗ ಆಧಾರಿತ ಸೌರ ಉತ್ಪನ್ನ ಅಳವಡಿಕೆ ಲಭಿಸಿದೆ.
ವೇದಿಕೆಯಲ್ಲಿ ಸೆಲ್ಕೋ ಸಂಸ್ಥೆಯ ನಿರ್ದೇಶಕರು ಮ್ಯಾಗ್ಸೆಸ್ ಪ್ರಶಸ್ತಿ ಪುರಸ್ಕೃತ ಡಾ. ಹರೀಶ್ ಹಂದೆ , ಮುಖ್ಯ ಕಾರ್ಯನಿರ್ವಣಾಧಿಕಾರಿ ಮೋಹನ ಭಾಸ್ಕರ ಹೆಗಡೆ ,ಜನರಲ್ ಮ್ಯಾನೇಜರ್ ಫಣಿ, ಸೆಲ್ಕೋ ಫೌಂಡೇಶನ್ ಮುಖ್ಯಸ್ಥರು ಜೋಬಿ, ಹಿರಿಯ ಪ್ರಬಂಧಕರಾದ ಗುರುಪ್ರಕಾಶ್ ಶೆಟ್ಟಿ ,ಪ್ರಸಾದ್ ಅಡ್ಕಾರ್ ಉಪಸ್ಥಿತರಿದ್ದರು