ರೂ 39.88 ಲಕ್ಷ ಲಾಭ – ಶೇ.6 ಡಿವಿಡೆಂಡ್ ಘೋಷಣೆ
ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆಯು ಸಂಘದ ಅಧ್ಯಕ್ಷ ದಾಮೋದರ ಗೌಡ ಮದುವೆಗದ್ದೆಯವರ ಅಧ್ಯಕ್ಷತೆಯಲ್ಲಿ ಉಬರಡ್ಕ ಶ್ರಿ ನರಸಿಂಹ ಶಾಸ್ತಾವು ದೇವಾಲಯದ ಸಭಾಂಗಣದಲ್ಲಿ ಸೆ.24 ರಂದು ನಡೆಯಿತು.
ಸಂಘವು ವರದಿ ವರ್ಷದಲ್ಲಿ 135 ಕೋಟಿ ರೂ ವ್ಯವಹಾರ ನಡೆಸಿದ್ದು, ರೂ.39.88 ಲಕ್ಷ ಲಾಭಗಳಿಸಿದೆ. ಸದಸ್ಯರಿಗೆ ಶೇ.6 ಡಿವಿಡೆಂಡ್ ನೀಡಲಾಗುವುದು ಎಂದು ಅಧ್ಯಕ್ಷರು ಹೇಳಿದರು.
ಸಹಕಾರಿ ಸಂಘದ ನೂತನ ಕಟ್ಟಡದ ಕೆಲಸ ಕಾರ್ಯಗಳು ನಡೆಯುತ್ತಿದೆ . 75 ರಷ್ಟು ಕಾಮಗಾರಿ ಆಗಿದೆ. ಡಿಸೆಂಬರ್ ನಲ್ಲಿ ಹೊಸ ಕಟ್ಟಡದ ಉದ್ಘಾಟನೆ ಮಾಡಲು ಆಡಳಿತ ಮಂಡಳಿ ನಿರ್ಧರಿಸಿದೆ. ನಂತರ ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸೂಪರ್ ಮಾರ್ಕೆಟ್, ಕೃಷಿಗೊಬ್ಬರ ಕೇಂದ್ರ ಮಾಡುವ ಯೋಚನೆ ಹಾಕಿಕೊಳ್ಳಲಾಗಿದ್ದು, ಸದಸ್ಯರ ಸಲಹೆ ಸಹಕಾರಗಳನ್ನು ಪಡೆದು ಮುಂದೆ ಹೋಗುತ್ತೇವೆ. ಸಹಕಾರ ಸಂಘದಲ್ಲಿ 100 ಶೇಕಡಾ ಸಾಲ ವಸೂಲಾತಿ ಆಗುವಂತೆ ಸದಸ್ಯರು ಸಹಕರಿಸಬೇಕು. ಎಂದು ಅಧ್ಯಕ್ಷರಾದ ದಾಮೋದರ ಗೌಡ ಮದುವೆಗದ್ದೆ ಹೇಳಿದರು.
ಸಂಘದ ಉಪಾಧ್ಯಕ್ಷ ರಾಜೇಶ್ ಭಟ್ ನೆಕ್ಕಿಲ, ಸಂಘದ ನಿರ್ದೇಶಕರುಗಳಾದ ಯು.ವಿ. ಭಾಸ್ಕರ ರಾವ್, ಗಂಗಾಧರ ಪಿ.ಎಸ್, ಸುರೇಶ್ ಎಂ.ಎಚ್, ಜಗದೀಶ ಕಕ್ಕೆಬೆಟ್ಟು, ಹರಿಪ್ರಸಾದ್ ಪಾನತ್ತಿಲ, ವಿಜಯಕುಮಾರ್ ಉಬರಡ್ಕ, ಈಶ್ವರ ಆರ್.ಕಲ್ಚಾರ್, ಹರೀಶ್ ಎಂ.ಎಸ್, ಶ್ರೀಮತಿ ಶಾರದಾ ಡಿ.ಶೆಟ್ಟಿ, ಶ್ರೀಮತಿ ಲೀಲಾವತಿ ಬಳ್ಳಡ್ಕ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರತಿನಿಧಿ ಬಾಲಕೃಷ್ಣ ಪಿ. ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ಉರುಂಡೆ ಪ್ರಸಕ್ತ ಸಾಲಿನ ವರದಿ ವಾಚಿಸಿದರು. ಅನ್ವಿತ ಎಂ.ಆರ್ ಪ್ರಾರ್ಥಿಸಿದರು. ನಿರ್ದೇಶಕರಾದ ಶಾರದಾ ಡಿ.ಶೆಟ್ಟಿ ವಂದಿಸಿದರು. ಸಹಾಯಕ ಕಾರ್ಯರ್ನಿರ್ವಹಣಾಧಿಕಾರಿ ಶಿವಪ್ರಸಾದ್ ಪಿ.ಎಂ, ಸಿಬ್ಬಂದಿ ಶ್ರೀಮತಿ ರಮ್ಯ ಕೆ.ಆರ್, ಗುರುವ ಸಹಕರಿಸಿದರು.
ಪ್ರತಿಭಾ ಪುರಸ್ಕಾರ
ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಮಹಾಸಭೆಯಲ್ಲಿ ವಿತರಿಸಲಾಯಿತು. ಈ ಬಾರಿ ಉಬರಡ್ಕ ಸ.ಹಿ.ಪ್ರಾ ಶಾಲೆಯ ಪ್ರಥಮ ಸ್ಥಾನಿಯಾದ ರತ್ನಾಕರ ಕೆದಂಬಾಡಿ ಇವರ ಪುತ್ರ ಅಕ್ಷಯ್, ದ್ವಿತೀಯ ಜಯರಾಮ ನೈಯೋಣಿ ರವರ ಪುತ್ರ ಜೀವನ್ ಜೆ., ಅಮೈಮಡಿಯಾರು ಸ.ಹಿ.ಪ್ರಾ.ಶಾಲೆಯ ಪ್ರಥಮ ಸ್ಥಾನಿಯಾದ ರಮೇಶ್ ಭಟ್ ಕುತ್ತಮೊಟ್ಟೆ ಇವರ ಪುತ್ರಿ ಅನ್ವಿತ ಎಂ.ಆರ್, ದ್ವಿತೀಯ ಜಯಣ್ಣ ಕೊಡ್ಲಿಪೇಟೆ ಇವರ ಪುತ್ರಿ ಅನುಶ್ರೀ ಜೆ.ಜೆ, ಹಾಗೂ ಸ.ಹಿ.ಪ್ರಾ ಶಾಲೆ ಕೊಡಿಯಾಲಬೈಲು ಇಲ್ಲಿನ ಪ್ರಥಮ ಸ್ಥಾನಿಯಾದ ಸುರೇಶ್ ಕೊಡಿಯಾಲಬೈಲು ಇವರ ಪುತ್ರಿ ಅಪೇಕ್ಷಾ, ದ್ವಿತೀಯ ದಿನೇಶ್ ಕೊಡೆಂಕಿರಿ ಇವರ ಪುತ್ರಿ ಭೂಮಿಕಾ ಆರ್. ಇವರನ್ನು ಗೌರವಿಸಲಾಯಿತು.