ಸಂಪಾಜೆ ಮತ್ತು ಕೊಯನಾಡು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಂದ ಚಿಣ್ಣರ ದರ್ಶನ ವನ ಪ್ರವಾಸ

0

ಸಂಪಾಜೆ ವಲಯ ಅರಣ್ಯ ಇಲಾಖೆಯ ವತಿಯಿಂದ ಸಂಪಾಜೆ ಮತ್ತು ಕೊಯನಾಡಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಮತ್ತು ಹಾರಂಗಿ ಆನೆ ಶಿಬಿರಗಳಲ್ಲಿ ಚಿಣ್ಣರ ವನ ದರ್ಶನ ಪ್ರವಾಸವನ್ನು ಸೆ.26ರಂದು ಮಾಡಿಸಲಾಯಿತು.

ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಸಂಪಾಜೆ ಮತ್ತು ಕೊಯನಾಡು ಸರ್ಕಾರಿ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.