ಕುಂಬರ್ಚೋಡು : ಸ್ವಚ್ಛತಾ ಆಂದೋಲನ

0

ಜಾಲ್ಸೂರು ಗ್ರಾಮ ಪಂಚಾಯತ್, ಮೊಹಿಯದ್ದೀನ್ ಜುಮ್ಮಾ ಮಸೀದಿ ಕುಂಬರ್ಚೋಡು,ಪೀಸ್ ಸ್ಕೂಲ್ ಬೊಳುಬೈಲು ಹಾಗೂ ಬಿ.ಯಫ್.ಸಿ ಸ್ಪೋರ್ಟ್ಸ್ ಕ್ಲಬ್ ಇದರ ಜಂಟಿ ಆಶ್ರಯದಲ್ಲಿ ಅ 1ರಂದು ಕುಂಬರ್ಚೋಡು ಪರಿಸರದಲ್ಲಿ ಸ್ವಚ್ಛತಾ ಆಂದೋಲನ ಕಾರ್ಯಕ್ರಮ
ನಡೆಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ. ತಿರುಮಲೇಶ್ವರಿ,ಮಸೀದಿ ಅಧ್ಯಕ್ಷರಾದ ಅಬ್ದುಲ್ ಕರೀಂ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಬ್ಬಯ್ಯ,ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ಲೀಲಾವತಿ,ಪೀಸ್ ಸ್ಕೂಲ್ ಸಂಚಾಲಕ ಅಬೂಬಕ್ಕರ್ ಹಾಜಿ ಹಾಗೂ ಬಿ.ಎಫ್.ಸಿ ಕ್ಲಬ್ ಅಧ್ಯಕ್ಷ ರೂಫೈದ್,ಗ್ರಾಮ ಪಂಚಾಯತ್ ಸಿಬ್ಬಂದಿ ಚಿದಾನಂದ, ಸ್ಥಳೀಯರಾದ ಕುಂಞಾಮು, ಅಬ್ದುಲ್ ಗಪೂರ್, ಮೊಹಿದ್ದಿನ್ ಕಾರ್ಲೆ, ಮಹಮ್ಮದ್ ಮತ್ತಿತರರು ಭಾಗವಹಿಸಿದರು.