ಪಂಜ ಲಯನ್ಸ್ ಕ್ಲಬ್ ವತಿಯಿಂದ ಶಾಲಾ ಮಕ್ಕಳಿಗೆ ಸಮವಸ್ತ್ರವಿತರಣೆ

0

 ಪಂಜ ಲಯನ್ಸ್ ಕ್ಲಬ್ ವತಿಯಿಂದ ಅ.6ರಂದು ಸ. ಕಿ ಪ್ರಾಥಮಿಕ ಶಾಲೆ ಹೇಮಳ, ಇಲ್ಲಿಯ ಎಲ್ಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಮಾಡಲಾಯಿತು. ಈ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಪಂಜ ಇದರ ಅಧ್ಯಕ್ಷರಾದ ದಿಲೀಪ್ ಬಾಬ್ಲುಬೆಟ್ಟು ರವರು ವಹಿಸಿದ್ದರು, ವೇದಿಕೆಯಲ್ಲಿಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಕ ಬಾಲಕೃಷ್ಣ ಗೌಡ ಹೇಮಳ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಯತೀಶ್ ಹೇಮಳ, ಮುಖ್ಯ ಶಿಕ್ಷಕಿ ವೇದಾವತಿ ಬೊಳ್ಳಾಜೆ, ನಿಕಟಪೂರ್ವ ಅಧ್ಯಕ್ಷ ಲ. ಪುರುಷೋತ್ತಮ ದoಬೆಕೋಡಿ, ಕಾರ್ಯದರ್ಶಿ ಲ. ವಾಸುದೇವ ಮೇಲ್ಪಾಡಿ  ಕೋಶಾಧಿಕಾರಿ ಲ. ಆನಂದ ಗೌಡ, ಉಪಸ್ಥಿತರಿದ್ದರು.      
  ಈ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ನ ಎಲ್ಲಾ ಸದಸ್ಯರು, ಶಾಲೆಯ S.D.M.C ಸದಸ್ಯರು, ಪೋಷಕರು, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಲ. ಶಶಿಧರ ಪಳಂಗಾಯ ಸ್ವಾಗತಿಸಿ, ಲ. ಸುರೇಶ್ ನಡ್ಕವಂದಿಸಿದರು .