ಇಂಚರ ಸಂಜೀವಿನಿ ಸಂಘದ ಸದಸ್ಯರಿಂದ ಹಾಗೂ ಸ್ಥಳೀಯರಿಂದ ಮೊಗ್ರದಿಂದ ಗಡಿಕಲ್ಲುವರೆಗೆ ಶ್ರಮದಾನ

0

ಗುತ್ತಿಗಾರು ಗ್ರಾಮದ ಮೊಗ್ರ ಇಂಚರ ಸಂಜೀವಿನಿ ಸಂಘದ ಸದಸ್ಯರು ಹಾಗೂ ಊರವರು ಮೊಗ್ರ ಗಡಿಕಲ್ಲಿನಿಂದ ಚಿಕ್ಮುಳಿ‌, ಗಬ್ಲಡ್ಕ ರೋಡ್ ತನಕ ಸುಮಾರು ಒಂದುವರೆ ಕಿಲೋಮೀಟರ್ ದೂರ ರೋಡ್ ಬದಿಯ ಎರಡು ಭಾಗದ ಕಾಡು ಕಡಿದು ಪ್ಲಾಸ್ಟಿಕ್, ಬಾಟ್ಲಿ ತ್ಯಾಜ್ಯಗಳನ್ನು ಹೆಕ್ಕಿ ಅ. 8ರಂದು ಸ್ವಚ್ಛಗೊಳಿಸಿದರು.

ಈ ಸಂದರ್ಭದಲ್ಲಿ ಮಿತ್ರಕುಮಾರಿ ಚಿಕ್ಮುಳಿ‌, ಪ್ರೇಮಲತಾ ಚಿಕ್ಮುಳಿ‌, ಶಿಶೀಮ ಜಾಕೆ, ಚೇತನ ಚಿಕ್ಮುಳಿ, ಸುನಿತಾ ಕೊಳೆಂಜಿ, ನಿಶಾ ಕೊಳೆಂಜಿ,ಚಂದ್ರವತಿ ಅಣ್ಣಪ್ಪ,ಗುಣವತಿ ಶೂರಪ್ಪ,ಪುಟ್ಟು ಮಾತ್ರಮಜಲ್.ಶಾರ್ವರಿ ಚಿಕ್ಮುಳಿ ಜಸ್ವಿತ್ ಚಿಕ್ಮುಳಿ, ಮನ್ವಿತ್ ಚಿಕ್ಮುಳಿ,
ಲೋಕೇಶ್ ಕುದುರಡ್ಕ ,ಉಜಿತ್ ಶ್ಯಾಮ್ ಚಿಕ್ಮುಳಿ, ರೋಟರಿ ಕ್ಲಬ್ ಸಿಟಿ ಸುಳ್ಯ ಸದಸ್ಯ ನೇಮಿರಾಜ್ ಚಿಕ್ಮುಳಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಮಂಜಪ್ಪ ಗೌಡ ಚಿಕ್ಮುಳಿ ಹಾಗೂ ಕಾರ್ಯಪ್ಪ ಗೌಡ ಚಿಕ್ಮುಳಿ‌ ಸಹಕರಿಸಿದರು.