ದುಬೈಯಲ್ಲಿ ಕೆಸಿಎಫ್ ಮಿಲಾದ್ ಕಾನ್ಫರೆನ್ಸ್

0

ಕೆಸಿಎಫ್ ದುಬೈ ಸೌತ್ ಝೋನ್ ವತಿಯಿಂದ ಮಿಲಾದ್ ಕಾನ್ಫರೆನ್ಸ್ ಕಾರ್ಯಕ್ರಮ ದುಬೈಯ ಹಾಲಿಡೇ ಇನ್ ಬುರ್ಜ್ಮನ್ ನಲ್ಲಿ ಅ.8 ರಂದು ನಡೆಯಿತು.
ಸಯ್ಯದ್ ಝೈನುಲ್ ಅಬಿದೀನ್ ಅಲ್ ಬುಖಾರಿ ಕೂರಿಕ್ಕುಝಿ ತಂಙಳ್ ಮಿಲಾದ್ ಕಾನ್ಫರೆನ್ಸ್ ಉದ್ಘಾಟಿಸಿ ದುವಾಶಿರ್ವಚನ ನೀಡಿದರು.


ಸಯ್ಯದ್ ತ್ವಾಹ ತಂಙಳ್ ಪುಕಟೂರ್ ಹಾಗೂ ಶಾಹಿನ್ ಬಾಬು ನೇತೃತ್ವದಲ್ಲಿ ಬುರ್ದಾಮಜ್ಲೀಸ್ ಮತ್ತು ಇಶಲ್ ನೈಟ್ ಕಾರ್ಯಕ್ರಮ ನಡೆಯಿತು.
ಸಜ್ಜನ ಪ್ರತಿಷ್ಠಾನ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ ಕಾರ್ಯಕ್ರಮದಲ್ಲಿ ಶುಭ ಹಾರೈಸಿದರು.


ಪತ್ರಕರ್ತ ಶರೀಫ್ ಜಟ್ಟಿಪಳ್ಳ ಸೇರಿದಂತೆ ಹಲವಾರು ಕೆಸಿಎಫ್ ಕಾರ್ಯಕರ್ತರು ಉಪಸ್ಥಿತರಿದ್ದರು.
ಅಸೀಫ್ ಇಂದ್ರಾಜೆ ಕಾರ್ಯಕ್ರಮ ನಿರೂಪಿಸಿದರು.