














ಕೇನ್ಯ ಗ್ರಾಮದ ಕಂಡೆಬಾಯಿ ನಿವಾಸಿಯಾಗಿರುವ ಡಾ. ಪ್ರಿಯಾಂಕ ರೈ ಇವರು ಎಂ.ಬಿ.ಬಿ.ಎಸ್. ಪದವಿ ಪಡೆದಿದ್ದು, ಇದೀಗ ಸರಕಾರಿ ಕೋಟಾದಡಿಯಲ್ಲಿ ಎಂ.ಎಸ್. ಜನರಲ್ ಸರ್ಜರಿ ಸ್ನಾತಕೋತ್ತರ ಪದವಿಗೆ ಸ್ಥಾನ ಪಡೆದುಕೊಂಡಿದ್ದಾರೆ.
2023 ನೇ ಸಾಲಿನ ನೀಟ್ ಪರೀಕ್ಷೆಯಲ್ಲಿ ಅತ್ಯುತ್ತಮ ರ್ಯಾಂಕ್ ಪಡೆದು ಮಂಡ್ಯ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಸಂಸ್ಥೆಯಲ್ಲಿ ಜನರಲ್ ಸರ್ಜರಿ ವಿಭಾಗದಲ್ಲಿ ಸೀಟ್ ಪಡೆದುಕೊಂಡಿದ್ದಾರೆ. ಧಾರವಾಡದ ಶ್ರೀ ಮಂಜುನಾಥೇಶ್ವರ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್. ಪದವಿ ಪಡೆದ ಡಾ. ಪ್ರಿಯಾಂಕ ರೈ ಇವರು ಎರಡನೇ ವರ್ಷದ ಫೊರೆನ್ಸಿಕ್ ವಿಭಾಗದಲ್ಲಿ ಮತ್ತು ಅಂತಿಮ ವರ್ಷದ ಪಿಡಿಯಾಟ್ರಿಕ್ಸ್ ವಿಭಾಗದಲ್ಲಿ ಅತ್ಯಂತ ಹೆಚ್ಚು ಅಂಕಗಳೊಂದಿಗೆ ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದರು.
ಕಡಬ ತಾಲೂಕು ಕೇನ್ಯ ಗ್ರಾಮದ ಕಾಯರ್ತಡ್ಕ ಶ್ರೀ ಹೊಸಮ್ಮ ದೈವಸ್ಥಾನದ ಆಡಳಿತದಾರರಾದ ಕಿಶೋರ್ ರೈ ಕೇನ್ಯ ಕಂಡೆಬಾಯಿ, ಪೆರ್ವತ್ತೋಡಿಗುತ್ತು ಮತ್ತು ಬ್ಯಾಂಕ್ ಆಫ್ ಬರೋಡದಲ್ಲಿ ಉದ್ಯೋಗಿಯಾಗಿರುವ ಶ್ರೀಮತಿ ಆರತಿ ಬಿ. ಶೆಟ್ಟಿ ಕಾಪು ಮಜೂರು ದೊಡ್ಡಮನೆ (ಕಟ್ಟಿಂಗೇರಿ) ಇವರ ಪುತ್ರಿಯಾಗಿರುವ ಡಾ. ಪ್ರಿಯಾಂಕ ರೈಯವರು ಎಲ್.ಕೆ.ಜಿ.ಯಿಂದ 10ನೇ ತರಗತಿಯವರೆಗೆ ಬಾಲ್ದವಿನ್ಸ್ ಗರ್ಲ್ಸ್ ಹೈಸ್ಕೂಲ್ ರಿಚ್ಮಂಡ್ ರೋಡ್ ಬೆಂಗಳೂರು ಇಲ್ಲಿ ಕಲಿತು ಶೆ. 90 ಅಂಕಗಳೊಂದಿಗೆ ಐ.ಸಿ.ಎಸ್.ಇ. ಬೋರ್ಡ್ ನ 10ನೇ ತರಗತಿಯಲ್ಲಿ ತೇರ್ಗಡೆಯಾಗಿದ್ದರು. ನಂತರ ಪಿ.ಯು.ಸಿ. ವಿಜ್ಞಾನ ವಿಭಾಗದ ಪಿ.ಸಿ.ಎಂ.ಬಿ. ವಿದ್ಯಾಭ್ಯಾಸವನ್ನು ಎಂ.ಇ.ಎಸ್. ಕಿಶೋರ್ ಕೇಂದ್ರ ಮಲ್ಲೇಶ್ವರಂ ಬೆಂಗಳೂರು ಇಲ್ಲಿ ಪೂರೈಸಿ 98.79% ಅಂಕಗಳನ್ನು ಪಡೆದು 2016-17ನೇ ಸಾಲಿನ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಎಂ.ಬಿ.ಬಿ.ಎಸ್. ಪದವಿಗೆ ಆಯ್ಕೆಯಾಗಿದ್ದರು. ತಮ್ಮ ಕಠಿಣ ಪರಿಶ್ರಮದಿಂದ ಉತ್ತಮ ಅಂಕಗಳಿಸಿ ಎರಡು ಗೋಲ್ಡ್ ಮೆಡಲ್ ನೊಂದಿಗೆ ಎಂ.ಬಿ.ಬಿ.ಎಸ್. ಪದವಿ ಪೂರೈಸಿ ನಮ್ಮ ಜಿಲ್ಲೆಗೆ ಹೆಸರು ತಂದುಕೊಟ್ಟಿದ್ದಾರೆ. ಇವರ ಸಹೋದರ ಕಾರ್ತಿಕ್ ರೈ ಕೆ ಬೆಂಗಳೂರಿನ ಶ್ರೀಕೃಷ್ಣ ಇನ್ಸ್ಟಿಟ್ಯೂಟ್ ನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿಯನ್ನು ವಿಶಿಷ್ಟ ಶ್ರೇಣಿಯಲ್ಲಿ ಪೂರೈಸಿರುತ್ತಾರೆ.










