ಸಂಪಾಜೆ: ಚೆಡಾವು ಬಳಿ ಗೂಡ್ಸ್ ರಿಕ್ಷಾ – ಕಾರು ಅಪಘಾತ – ಜಖಂ

0

ಗೂಡ್ಸ್ ರಿಕ್ಷಾ ಚಾಲಕನಿಗೆ ಗಾಯ

ಗೂಡ್ಸ್ ರಿಕ್ಷಾ ಮತ್ತು ಕಾರಿನ ಮಧ್ಯೆ ಪರಸ್ಪರ ಢಿಕ್ಕಿ ಸಂಭವಿಸಿ, ರಿಕ್ಷಾ ಚಾಲಕ ಸಣ್ಣಪುಟ್ಟ ಗಾಯಗೊಂಡು ಎರಡೂ ವಾಹನಗಳು ಜಖಂಗೊಂಡ ಘಟನೆ ಕೊಡಗು ಸಂಪಾಜೆ ಗ್ರಾಮದ ಚೆಡಾವು ಎಂಬಲ್ಲಿ ಅ.12ರಂದು ಸಂಜೆ ಸಂಭವಿಸಿದೆ.

ಮಡಿಕೇರಿ ಕಡೆಯಿಂದ ಸುಳ್ಯಕ್ಕೆ ಬರುತ್ತಿದ್ದ ಕಾರು ಮತ್ತು ಸಂಪಾಜೆಯಿಂದ ಕೊಯನಾಡು ಕಡೆಗೆ ತೆರಳುತ್ತಿದ್ದ ಗೂಡ್ಸ್ ರಿಕ್ಷಾದ ನಡುವೆ ಅಪಘಾತ ಸಂಭವಿಸಿದ್ದು, ಗೂಡ್ಸ್ ರಿಕ್ಷಾ ಚಾಲಕ ಸಣ್ಣಪುಟ್ಟ ಗಾಯಗೊಂಡಿದ್ದು, ಎರಡೂ ವಾಹನಗಳು ಜಖಂಗೊಂಡಿರುವುದಾಗಿ ತಿಳಿದುಬಂದಿದೆ.