ಅರಂತೋಡು ಗ್ರಾ.ಪಂ. ಆಡಳಿತ ತಂಡದಿಂದ ಬಳ್ಳಾರಿಯ ಬಂಡ್ರಿ ಗ್ರಾ.ಪಂಗೆ ಅಧ್ಯಯನ ಪ್ರವಾಸ

0

ಬಳ್ಳಾರಿ – ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಯ ಐತಿಹಾಸಿಕ ಸ್ಥಳಗಳಿಗೆ ಭೇಟಿ

2021-22 ಸಾಲಿನ ರಾಜ್ಯ ಸರ್ಕಾರದ ಗಾಂಧಿ ಗ್ರಾಮ ಪ್ರಶಸ್ತಿ ಪುರಸ್ಕತ ಅರಂತೋಡು ಗ್ರಾಮ ಪಂಚಾಯಿತಿಯ ಆಡಳಿತ ಸಮಿತಿಯ ಸದಸ್ಯರು ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕು ಬಂಡ್ರಿ ಗ್ರಾಮ ಪಂಚಾಯಿತಿಗೆ ಅ.12ರಂದು ಅಧ್ಯಯನ ಪ್ರವಾಸ ಕೈಗೊಂಡಿದ್ದರು.

ಬಂಡ್ರಿ ಗ್ರಾಮ ಪಂಚಾಯಿತಿನ ಕಾರ್ಯಾಲಯದಲ್ಲಿ ಎರಡು ಪಂಚಾಯಿತಿಗಳ ಆಡಳಿತ ಮತ್ತು ಅಭಿವೃದ್ಧಿ, ಸ್ವಚ್ಛತೆ ವಿಷಯಗಳ ಬಗ್ಗೆ ಪರಸ್ಪರ ವಿಚಾರ ವಿನಿಮಯ ಮಾಡಿ, ಬಂಡ್ರಿ ಗ್ರಾಮ ಪಂಚಾಯಿತಿನ ಗ್ರಂಥಾಲಯ ಅಮೃತ ಸರೋವರ, ಘನ ತ್ಯಾಜ ಘಟಕಗಳಿಗೆ, ಹಾಗೂ ಕೂಡ್ಲಿಗಿ ಯಲ್ಲಿರುವ ಮಹಾತ್ಮಾ ಗಾಂಧಿ ಚಿತಾ ಭಸ್ಮ ವಿರುವ ಸ್ಮಾರಕಗಳಿಗೆ ಭೇಟಿ ನೀಡಿದರು.


ಈ ಸಂದರ್ಭದಲ್ಲಿ ಕೊಪ್ಪಳ ತಾಲೂಕು ಕೊಪ್ಪಳ ಗ್ರಾಮದ ಹುಲಿಗೆಯಲ್ಲಿರುವ ಬಹುಗ್ರಾಮ ಘನ ತ್ಯಾಜ್ಯ ಘಟಕಕ್ಕೆ ಸಮಿತಿ ಭೇಟಿ ನೀಡಿದರು, ದೇವಗಿರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಾಲುಕ್ಯರ ಕಾಲದ ಕುಮಾರಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದರು.

ಅಧ್ಯಯನ ಪ್ರವಾಸದ ಜೊತೆಗೆ ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ಐತಿಹಾಸಿಕ ಸ್ಥಳಗಳಾದ ಹಂಪಿ ವಿರೂಪಾಕ್ಷ ದೇವಾಲಯ, ಹನುಮನ ಜನ್ಮಸ್ಥಳವಾದ ಅಂಜನಾದ್ರಿ ಬೆಟ್ಟ, ಹುಲಿಗಮ್ಮ ದೇವಾಲಯ ಹಾಗೂ ತುಂಗಭದ್ರಾ ಅಣೆಕಟ್ಟು ಪ್ರದೇಶಗಳಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅರಂತೋಡು ಪಂಚಾಯಿತಿ ಅಧ್ಯಕ್ಷ ಕೇಶವ ಅಡ್ತಲೆ, ಉಪಾಧ್ಯಕ್ಷೆ ಶ್ರೀಮತಿ ಭವಾನಿ ಚಿಟ್ಟನೂರು, ಮಾಜಿ ಅಧ್ಯಕ್ಷೆ ಶ್ರೀಮತಿ ಹರಿಣಿ ದೇರಾಜೆ, ಮಾಜಿ ಉಪಾಧ್ಯಕ್ಷೆ ಶ್ವೇತಾ ಅರಮನೆ ಗಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎಂ.ಆರ್. ಪಂಚಾಯಿ ಸದಸ್ಯರಾದ ರವೀಂದ್ರ ಪಂಜಿಕೋಡಿ, ವೆಂಕಟರಮಣ ಪೆತ್ತಾಜೆ,ಶ್ರೀಮತಿ ಮಾಲಿನಿ ವಿನೋದ್, ಪುಷ್ಪಾದರ ಕೋಡಂಕೇರಿ, ಶಶಿಧರ ದೊಡ್ಡ ಕುಮೇರಿ, ಪಂಚಾಯಿತಿ ಸಿಬ್ಬಂದಿಗಳಾದ ಮೋಹನ ದೇರಾಜೆ, ಚೌಕಾರು ತೊಡಿಕಾನ ಉಪಸ್ಥಿತರಿದ್ದರು.