ಅ‌15 ರಿಂದ ಅ.23 : ಶ್ರೀ ವನದುರ್ಗಾದೇವಿ ದೇವಸ್ಥಾನ ಸುಬ್ರಹ್ಮಣ್ಯದಲ್ಲಿ ಶರವನ್ನವರಾತ್ರಿ ಉತ್ಸವ

0

ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಆಡಳಿತಕ್ಕೊಳಪಟ್ಟ ಶ್ರೀ ವನದುರ್ಗಾದೇವಿ ದೇವಸ್ಥಾನದಲ್ಲಿ
ಅ.15 ರಿಂದ ಅ. 23 ರ ಮಹಾನವಮಿಯವರೆಗೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿರುವುದು.

ಅ. 15. ಸಂಜೆ ಕುಕ್ಕೆ ಶ್ರೀ ಭಜನಾ ಮಂಡಳಿ ವತಿಯಿಂದ ಭಜನೆ ನಡೆಯಲಿದೆ, ಬಳಿಕ ಮಂಜುಶ್ರೀ ಮಹಿಳಾ ಭಜನಾ ಮಂಡಳಿ ಮಣಿಭಾಂಡ ಇವರಿಂದ ಕುಣಿತ ಭಜನೆ, ದೇವಸೇನ ಮಿತ್ರ ಬಳಗ ಅಗರಿಕಜೆ ಕಲಾವಿದರಿಂದ ಸಾಂಸ್ಕೃತಿಕ ವೈವಿಧ್ಯ ಹಾಗೂ ಶ್ರೀ ಕೃಷ್ಣ ಕಲಾ ತಂಡ ಬಿಳಿನೆಲೆ ಸ್ಥಳೀಯ ಸದಸ್ಯರಿಂದ ತುಳು ಹಾಸ್ಯಮಯ ನಾಟಕ “ನೆತ್ತರಾ ನೀರಾ? ನಡೆಯಲಿದೆ. ಅ.16 ರ ಸಂಜೆ ಶ್ರೀವಲ್ಲಿ ಮಹಿಳಾ ಭಜನಾ ಮಂಡಳಿ ವತಿಯಿಂದ ಭಜನೆ ನಡೆಯಲಿದೆ. ಬಳಿಕ ಕಾರ್ತಿಕೇಯ ಭಜನಾ ಮಂಡಳಿ ನೇಲಡ್ಕ ಕುಣಿತ ಭಜನೆ, ಕುಮಾರಿ ವರ್ಷಾ ಬಿದರಳ್ಳಿ, ಕುಮಾರಿ ವೃಂದಾ ಬಿದರಳ್ಳಿ ಅವರಿಂದ ಭರತನಾಟ್ಯ ನಡೆಯಲಿದೆ. ಅ.17ರ ಸಂಜೆ ವಿದ್ಯಾಸಾಗರ ಭಜನಾ ಮಂಡಳಿ ಸುಬ್ರಹ್ಮಣ್ಯ ವತಿಯಿಂದ ಭಜನೆ, ಬಸವೇಶ್ವರ ಭಜನಾ ಮಂಡಳಿ ಕುಲ್ಕುಂದ ವತಿಯಿಂದ ರಾತ್ರಿ ಕುಣಿತ ಭಜನೆ ಬಳಿಕ ಕುಮಾರಿ ಚಿಂತನಾ ಹೆಗೆಡೆ ಮಾಳಕೋಡು ಮತ್ತು ಚಿನ್ಮಯ ಭಟ್ ಕಲ್ಲಡ್ಕ ಯಕ್ಷನಾಟ್ಯ ವೈಭವ, ತೆಂಕು ಬಡಗು, ನಡೆಯಲಿದೆ. ಅ. 18 ರ ಸಂಜೆ ದುರ್ಗಾಶಕ್ತಿ ಮಹಿಳಾ ಭಜನಾ ಮಂಡಳಿ ಹಾಲೆಮಜಲು ಭಜನೆ, ಕುಣಿತ ಭಜನೆ ಬಸವೇಶ್ವರ ಭಜನಾ ಮಂಡಳಿ ಕುಲ್ಕುಂದ ವತಿಯಿಂದ ಕುಣಿತ ಭಜನೆ, ಬಳಿಕ ಶ್ರೀ ವಿಠಲನಾಯಕ್ ಇವರಿಂದ ವಿನೂತನ ಶೈಲಿಯ ಗೀತಾಸಾಹಿತ್ಯ ಸಂಭ್ರಮ ನಡೆಯಲಿದೆ. ಅ.19 ರಂದು ಲಲತಾ ಪಂಚಮಿ. ಸಂಜೆ ಹರಿಹರೇಶ್ವರ ಭಜನಾ ಮಂಡಳಿ ವತಿಯಿಂದ ಭಜನೆ, ಮಹಾಲಿಂಗೇಶ್ವರ ಕುಣಿತ ಭಜನಾ ಮಂಡಳಿ ಮರ್ಧಾಳ, ವತಿಯಿಂದ ಕುಣಿತ ಭಜನೆ, ಬಳಿಕ ಗೋಪಾಲಕೃಷ್ಣ ಪ್ರೌಢಶಾಲೆ ಮತ್ತು ವೇದವ್ಯಾಸ ವಿದ್ಯಾಲಯ ಬಿಳಿನೆಲೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ನಡೆಯಲಿದೆ. ಅ.20 ರ ಸಂಜೆ ಶ್ರೀ ರಾಘವೇಂದ್ರ ಭಜನಾ ಮಂಡಳಿ ಕಲ್ಲಾರೆ, ಪುತ್ತೂರು ವತಿಯಿಂದ ಭಜನೆ, ಕುಕ್ಕೆ ಶ್ರೀ ಮಕ್ಕಳ ಕುಣಿತ ಭಜನಾ ತಂಡ ದೇವರಗದ್ದೆ ವತಿಯಿಂದ ಕುಣಿತ ಭಜನೆ ಬಳಿಕ ಶ್ರೀ ಕೃಷ್ಣಾ ಮೆಲೋಡಿಸ್ ಸುರತ್ಕಲ್ ವತಿಯಿಂದ ಭಕ್ತಿಭಾವ ಜಾನಪದ ಗಾನ ಸಂಭ್ರಮ ನಡೆಯಲಿದೆ. ಅ. 21 ರ ಸಂಜೆ ವಿಶ್ಲೇಶ್ವರ ಭಜನಾ ಮಂಡಳಿ ನೆಟ್ಟಣ ವತಿಯಿಂದ ಭಜನೆ, ಶ್ರೀ ಗೋಪಾಲಕೃಷ್ಣ ಮಹಿಳಾ ಭಜನಾ ಮಂಡಳಿ ಬಿಳಿನೆಲೆ ವತಿಯಿಂದ ಕುಣಿತ ಭಜನೆ ನಡೆಯಲಿದೆ. ಬಳಿಕ ಡಾ. ರಕ್ಷಾ ಕಾರ್ತಿಕ್ ನಟನಂ ಕಲಾತಂಡ ಬೆಂಗಳೂರು ಇವರಿಂದ ಭರತನಾಟ್ಯ ನಡೆಯಲಿದೆ. ಅ. 22 ದುರ್ಗಾಷ್ಟಮಿ, ಮಧ್ಯಾಹ್ನ ದುರ್ಗಾಂಬ ಮಹಿಳಾ ಯಕ್ಷಗಾನ ತಡ್ಡಂಬೈಲು ಸುರತ್ಕಲ್ ಇವರಿಂದ ತಾಳಮದ್ದಲೆ, ಸಂಜೆ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಬಿಳಿನೆಲೆ ಇವರಿಂದ ಕುಣಿತ ಭಜನೆ, ನಡುಮನೆ ಯಕ್ಷಗಾನ ತಂಡ ಶಿಶಿಲ ಇವರಿಂದ ಯಕ್ಷಗಾನ ” ಅತಿನೂತನ” ನಡೆಯಲಿದೆ. ಅ.23 ಮಹಾನವಮಿ. ಸಂಜೆ ಶ್ರೀ ದುರ್ಗಾಪರಮೇಶ್ವರಿ ಭಜನಾ ತಂಡ ಮರಕತ ಇವರಿಂದ ಭಜನೆ, ಬಳಿಕ ಯಜ್ಞೇಶ್ ಆಚಾರ್ ಮತ್ತು ಬಳಗದವರಿಂದ ಭಕ್ತಿಸಂಗೀತ ನಡೆದು, ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ಕೃಪಾ ಪೋಷಿತ ದಶಾವತಾರ ಯಕ್ಷಮಂಡಳಿ ಬಪ್ಪನಾಡು ಮುಲ್ಕಿ ಇವರಿಂದ ತುಳು ಯಕ್ಷಗಾನ ಪ್ರಸಂಗ ‘ಕಾರಣಿಕೊದ ಪಂಚ ದೈವೊಲು” ನಡೆಯಲಿದೆ. ಅ. 24 ವಿಜಯದಶಮಿ ನಡೆಯಲಿದೆ.