ಸುಳ್ಯದಲ್ಲಿ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಸಮಕ್ಷಮದಲ್ಲಿ ನಡೆದ ಗಾಂಧಿಸ್ಮೃತಿ ಹಾಗೂ ಜನಜಾಗೃತಿ ಸಮಾವೇಶದ ಅಭಿನಂದನಾ ಕಾರ್ಯಕ್ರಮ

0

ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್, ಜಿಲ್ಲಾ ಜನಜಾಗೃತಿ ವೇದಿಕೆಯ ವತಿಯಿಂದ ಅ.3 ರಂದು ಸುಳ್ಯದ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನಡೆದ ಗಾಂಧಿಸ್ಮೃತಿ ಹಾಗೂ ಜನಜಾಗೃತಿ ಜಾಥಾ ಮತ್ತು ಸಮಾವೇಶದ ಅಭಿನಂದನಾ ಸಭೆಯು ಸುಳ್ಯ ಯೋಜನಾಧಿಕಾರಿ ಕಚೇರಿ ಸಭಾಭವನದಲ್ಲಿ ಅ.18 ರಂದು ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಲೋಕನಾಥ್ ಅಮೆಚೂರ್ ವಹಿಸಿ ಸಮಾವೇಶದ ಅಭೂತಪೂರ್ವ ಯಶಸ್ಸಿಗೆ ಸಹಕಾರ ನೀಡಿದ ಎಲ್ಲರನ್ನೂ ಅಭಿನಂದಿಸಿದರು.

ಧ.ಗ್ರಾ.ಯೋ. ಬಿ.ಸಿ.ಟ್ರಸ್ಟಿನ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್, ಪ್ರಗತಿ ಬಂಧು ಸ್ವ ಸಹಾಯ ಸಂಘದ ಕೇಂದ್ರ ಒಕ್ಕೂಟದ ಅಧ್ಯಕ್ಷ ಸುರೇಶ್ ಕಣೆಮರಡ್ಕ, ಉಡುಪಿ ವಿಭಾಗದ ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಆಚಾರ್ಯ, ಸುಳ್ಯ ತಾಲೂಕು ಯೋಜನಾಧಿಕಾರಿ ನಾಗೇಶ್ ಪಿ, ಗುರುಸ್ವಾಮಿ ಶಿವಪ್ರಕಾಶ್ ಅಡ್ಪಂಗಾಯ, ಮಹೇಶ್ ಕುಮಾರ್ ಮೇನಾಲ, ಪದ್ಮನಾಭ ಜೈನ್, ಬೂಡು ರಾಧಾಕೃಷ್ಣ ರೈ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಮಾವೇಶದ ಅಯ ವ್ಯಯದ ಕುರಿತು ಲೆಕ್ಕ ಪತ್ರ ಮಂಡಿಸಲಾಯಿತು.

ಕಾರ್ಯಕ್ರಮದ ಯಶಸ್ಸಿನ ಕುರಿತು ಜಿಲ್ಲಾ ನಿರ್ದೇಶಕ ರವರು ಮಾತನಾಡಿ ” ಸುಳ್ಯದಲ್ಲಿ ನಡೆದ ಸಮಾವೇಶ ಅತ್ಯಂತ ಶಿಸ್ತು ಬದ್ಧವಾಗಿ ನಡೆದು ಧರ್ಮಾಧಿಕಾರಿಯ
ವರಿಂದ ಶ್ಲಾಘನೆಗೆ ಪಾತ್ರವಾಗಿದೆ. ಜಾಥಾ ಸಮಾವೇಶಕ್ಕೆ ತಾಲೂಕು ಜಿಲ್ಲೆ ಮಾತ್ರವಲ್ಲದೆ ಪಕ್ಕದ ಕೇರಳ ರಾಜ್ಯದಿಂದ ಸದಸ್ಯರು ಆಗಮಿಸಿ ಅಚ್ಚು ಕಟ್ಟಾದ ವ್ಯವಸ್ಥೆಗೆ ಸಹಕರಿಸಿರುವುದು ಅಭಿನಂದನೀಯ.
ಅ. 29 ರಂದು ಕೊಲ್ಲೂರಿನಿಂದ ಹೊರಡಲಿರುವ ಧರ್ಮ ಸಂರಕ್ಷಣಾ ಪಾದಯಾತ್ರೆಯಲ್ಲಿ ತಾಲೂಕಿನಿಂದ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸುವಂತೆ ಕರೆ ನೀಡಿದರು.

ಕಾರ್ಯಕ್ರಮದ ಅಭೂತಪೂರ್ವ ಯಶಸ್ಸಿನ ಬಗ್ಗೆ ಧರ್ಮಾಧಿಕಾರಿಯವರು ಸ್ವತಃ ಮೆಚ್ಚುಗೆ ವ್ಯಕ್ತಪಡಿಸಿ ಸಂದೇಶ ಪತ್ರ ಕಳುಹಿಸಿರುವ ಬಗ್ಗೆ ಸಭೆಯಲ್ಲಿ ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಆಚಾರ್ಯ ಪ್ರಸ್ತಾಪಿಸಿದರು.

ವಿವಿಧ ಸಮಿತಿಯಲ್ಲಿ ಜವಬ್ದಾರಿ ವಹಿಸಿಕೊಂಡ ಸಂಚಾಲಕರಾದ ಬೂಡು ರಾಧಾಕೃಷ್ಣ ರೈ, ಮಹೇಶ್ ಕುಮಾರ್ ರೈ ಮೇನಾಲ, ಸುರೇಶ್ ಕಣೆಮರಡ್ಕ, ರವಿ ಅಡ್ಕಾರ್, ಪದ್ಮನಾಭ ಜೈನ್, ಭಾಸ್ಕರ ಅಡ್ಕಾರ್, ಮೇಲ್ವಿಚಾರಕಿ ವಿಶಾಲ ಕೆ ರವರು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜನಜಾಗೃತಿ ವೇದಿಕೆ ಅಧ್ಯಕ್ಷ ಲೋಕನಾಥ್ ಅಮೆಚೂರ್ ರವರನ್ನು ಪದ್ಮನಾಭ ಜೈನ್ ರವರು ಸನ್ಮಾನಿಸಿದರು.

ನ.3 ರಿಂದ 10 ರ ತನಕ ಅಜ್ಜಾವರ ಮಹಿಷಮರ್ದಿನಿ ದೇವಸ್ಥಾನದ ವಠಾರದಲ್ಲಿ ನಡೆಯಲಿರುವ 1753 ನೇ ಮದ್ಯವರ್ಜನ ಶಿಬಿರದ ಪೂರ್ವ ತಯಾರಿಯ ಬಗ್ಗೆ ಹಾಗೂ ಆಮಂತ್ರಣ ಪತ್ರಿಕೆಯ ಕರಡು ಪ್ರತಿಯ ಕುರಿತುಚರ್ಚಿಸಲಾಯಿತು. ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಿವಪ್ರಕಾಶ್ ಅಡ್ಪಂಗಾಯ ರವರು ಉಪಸ್ಥಿತರಿದ್ದರು.

ಸಭೆಯಲ್ಲಿ ವಲಯ ಮೇಲ್ವಿಚಾರಕರು, ಜನಜಾಗೃತಿ ವೇದಿಕೆಯ ಸದಸ್ಯರು, ನವಜೀವನ ಸಮಿತಿ ಸದಸ್ಯರು, ಭಜನಾ ಪರಿಷತ್ ಪದಾಧಿಕಾರಿಗಳು ಮತ್ತು ಸದಸ್ಯರು, ಒಕ್ಕೂಟದ ಸದಸ್ಯರುಉಪಸ್ಥಿತರಿದ್ದರು. ಸುಳ್ಯ ಯೋಜನಾಧಿಕಾರಿ ನಾಗೇಶ್ ಪಿ ಸ್ವಾಗತಿಸಿದರು. ನಿಂತಿಕಲ್ಲು ಮೇಲ್ವಿಚಾರಕಿ ಮಮತಾ ವಂದಿಸಿದರು. ಅಜ್ಜಾವರ ವಲಯಮೇಲ್ವಿಚಾರಕಿ ವಿಶಾಲ .ಕೆ ಕಾರ್ಯಕ್ರಮ ನಿರೂಪಿಸಿದರು.
ಆಗಮಿಸಿದ ಎಲ್ಲರಿಗೂ ‌ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು.