ಜಾಲ್ಸೂರು: ಮೀರಾ ಎಂಟರ್ ಪ್ರೈಸಸ್ ನಲ್ಲಿ ಆಯುಧ ಪೂಜೆ

0

ಜಾಲ್ಸೂರಿನಲ್ಲಿ ಕಳೆದ ಇಪ್ಪತ್ತೈದು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಪ್ರಶಾಂತ್ ಮೋಂಟಡ್ಕ ಅವರ ಮಾಲಕತ್ವದ ಮೀರಾ ಎಂಟರ್ ಪ್ರೈಸಸ್ ನಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ಗಣಪತಿ ಹವನ, ಲಕ್ಷ್ಮೀಪೂಜೆ ಹಾಗೂ ಆಯುಧ ಪೂಜೆಯು ಪುರೋಹಿತ ರಾಮಕೃಷ್ಣ ಭಟ್ ಅವರ ನೇತೃತ್ವದಲ್ಲಿ ಅ.21ರಂದು ನಡೆಯಿತು.


ಬೆಳಿಗ್ಗೆ ಗಣಪತಿ ಹವನ, ಲಕ್ಷ್ಮೀಪೂಜೆ ಹಾಗೂ ಸಂಸ್ಥೆಯ ವಾಹನಗಳಿಗೆ ಆಯುಧ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರಾದ ಪ್ರಶಾಂತ್ ಮೋಂಟಡ್ಕ, ಶ್ರೀಮತಿ ಮಮತ ಪ್ರಶಾಂತ್ ಮೋಂಟಡ್ಕ ಹಾಗೂ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು