ಸುಳ್ಯದ ಮಹಾಲಕ್ಷ್ಮೀ ಫ್ಯಾಶನ್‌ನಲ್ಲಿ ಹಬ್ಬಗಳ ಪ್ರಯುಕ್ತ ಬಿಗ್ ಸೇಲ್

0

ಡಿಸ್ಕೌಂಟ್ ಮೂಲಕ ಕಡಿಮೆ ಬೆಲೆ – ವಸ್ತ್ರಗಳ ಹೊಸ ಸಂಗ್ರಹ

ಸುಳ್ಯದ ಜವುಳಿ ಉದ್ಯಮದಲ್ಲಿ ಸದಾ ಹೊಸತನವನ್ನು ಪರಿಚಯಿಸುತ್ತಾ ಮನೆ ಮಾತಾಗಿರುವ ಸುಳ್ಯದ ಪ್ರತಿಷ್ಠಿತ ಜವುಳಿ ಮಳಿಗೆ, ಸುಳ್ಯ ಖಾಸಗಿ ಬಸ್ ನಿಲ್ದಾಣದ ಎದುರಿನ ಮಹಾಲಕ್ಷ್ಮೀ ಫ್ಯಾಶನ್ ವಸ್ತ್ರ ಮಳಿಗೆಯಲ್ಲಿ ಹಬ್ಬಗಳ ಸಂಭ್ರಮಕ್ಕಾಗಿ ಬಿಗ್ ಸೇಲ್ ಆರಂಭಗೊಂಡಿದೆ.
ಜವುಳಿ ಸೇರಿದಂತೆ ಮಕ್ಕಳ, ಮಹಿಳೆಯರ ಹಾಗೂ ಪುರುಷರ ಎಲ್ಲಾ ರೀತಿಯ ರೆಡಿಮೇಡ್ ಉಡುಪುಗಳನ್ನು ಅತೀ ಕಡಿಮೆ ಬೆಲೆಯಲ್ಲಿ ತಮ್ಮದಾಗಿಸಿಕೊಳ್ಳುವ ಸುವರ್ಣಾವಕಾಶವನ್ನು ಸಮರ್ಪಿಸುತ್ತಿದೆ.


ಹೊಸ ಹೊಸ ಬಟ್ಟೆಗಳ ಸಂಗ್ರಹ, ವಿನೂತನ ಶೈಲಿಯ, ಕಣ್ಮನ ಸೆಳೆಯುವ ನವನವೀನ ಮಾದರಿಯ ಉಡುಪುಗಳು, ಅತೀ ಕಡಿಮೆ ಬೆಲೆಗೆ ದೊರೆಯಲಿದ್ದು, ಗ್ರಾಹಕರಿಗೆ ತಮ್ಮ ಮನದಿಚ್ಚೆಯ ಉಡುಪುಗಳನ್ನು ಖರೀದಿಸುವ ವಿಪುಲ ಅವಕಾಶವನ್ನು ಮಹಾಲಕ್ಷ್ಮೀ ಮಳಿಗೆಯು ಕಲ್ಪಿಸಿದೆ. ಪ್ರತಿ ವರ್ಷ ನವರಾತ್ರಿ, ದೀಪಾವಳಿ ಇನ್ನಿತರ ಹಬ್ಬಗಳ ಸಂದರ್ಭ ತನ್ನ ಗ್ರಾಹಕರಿಗಾಗಿ ಕಡಿಮೆ ಬೆಲೆಯಲ್ಲಿ ತಮ್ಮ ಮನದಿಚ್ಚೆಯ ಉಡುಪುಗಳನ್ನು ಕೊಂಡುಕೊಳ್ಳುವ ವಿಪುಲ ಅವಕಾಶಗಳನ್ನು ನೀಡುತ್ತಿದೆ. ಈ ವರ್ಷವೂ ಬಿಗ್ ಸೇಲ್ ಆರಂಭಿಸಿದೆ. ಈ ಬಾರಿ ಹಬ್ಬದ ಸಂಭ್ರಮಕ್ಕಾಗಿ ಶೇ.೧೨ರಿಂದ ೧೮ ಶೇ ಡಿಸೌಂಟ್ ಗ್ರಾಹಕರಿಗೆ ನೀಡಲಾಗುತ್ತದೆ.
ಅತೀ ಕಡಿಮೆ ದರ, ಹೊಸ ಹೊಸ ಸಂಗ್ರಹ: ಹಬ್ಬದ ಸಂಭ್ರಮಕ್ಕಾಗಿ ಮಕ್ಕಳ ಉಡುಪುಗಳು ಲಭ್ಯವಿದ್ದು ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿದೆ. ಕಣ್ಮನ ಸೆಳೆಯುವ ಸೀರೆಗಳು, ಪುರುಷರ ಉಡುಪುಗಳು ಅತೀ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಸಾರಿ, ಚೂಡಿದಾರ್ ಪೀಸ್‌ಗಳು, ಕುರ್ತಿಸ್, ರೆಡಿಮೇಡ್ ಚೂಡಿದಾರ್‌ಗಳು, ನೈಟಿ, ಜಂಟ್ಸ್ ಪ್ಯಾಂಟ್-ಶರ್ಟ್ ಹಾಗೂ ಮಕ್ಕಳ ವೆಸ್ಟರ್ನ್ ಔಟ್‌ಫಿಟ್‌ಗಳು ಸೇರಿದಂತೆ ಎಲ್ಲಾ ಬಗೆಯ ನವ ನವೀನ ಮಾದರಿಯ ಉಡುಪುಗಳ ಬೃಹತ್ ಸಂಗ್ರಹವಿದೆ. ಫ್ಯಾಕ್ಟರಿಯಿಂದ ನೇರವಾಗಿ ಖರೀದಿಸಿದ ಉತ್ತಮ ಗುಣ ಮಟ್ಟದ ಉಡುಪುಗಳನ್ನು ಮಳಿಗೆ ಲಭ್ಯವಿದೆ.
ಮದುವೆಯ ಎಕ್ಸ್‌ಕ್ಲೂಸಿವ್ ಕಲೆಕ್ಷನ್: ಮದುವೆ ಸೀರೆಗಳ ಉತ್ತಮ ಆಯ್ಕೆಗೆ ಸುಳ್ಯದ ಮಹಾಲಕ್ಷ್ಮೀ ಫ್ಯಾಶನ್ಸ್ ವಸ್ತ್ರ ಮಳಿಗೆ ಪ್ರಥಮ ಆಯ್ಕೆಯಾಗಿದೆ. ಮದುವೆಯ ಶೃಂಗಾರಕ್ಕೆ ಮನಮೋಹಕ ಸೀರೆಗಳ ಅಪೂರ್ವ ಸಂಗ್ರಹ ಮಳಿಗೆಯಲ್ಲಿದೆ.