ಸುಳ್ಯ ರೋಟರಿ ಸಂಸ್ಥೆಯ ನೂತನ ಸಭಾಭವನದ ಕಾರ್ಯಾರಂಭ

0

ರೋಟರಿ ಕ್ಲಬ್ ಸುಳ್ಯ, ರೋಟರಿ ಚಾರಿಟೇಬಲ್ ಟ್ರಸ್ಟ್, ರೋಟರಿ ಕ್ಲಬ್ ಸುಳ್ಯ ಸಿಟಿ ಹಾಗೂ ಇನ್ನರ್ ವೀಲ್ ಸುಳ್ಯ ಸಂಸ್ಥೆಯ ಸಹಯೋಗದಲ್ಲಿ ರೋಟರಿ ಸಂಸ್ಥೆಯ ನೂತನ ಸಬಾಭವನದ ಕಾರ್ಯರಂಭವು ಮಹಾಗಣಪತಿ ಸ್ತುತಿಯೊಂದಿಗೆ ಅ
23 ರಂದು ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ರೋಟರಿ ಚಾರಿಟೇಬಲ್ ಟ್ರಸ್ಟ್ ಇದರ ಸ್ಥಾಪಕ ಅಧ್ಯಕ್ಷರಾದ ರೊ. ರಾಮಚಂದ್ರ ಪಿ, ನೂತನ ಸಭಾಭವನ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ರೊ. ಸೀತಾರಾಮ ರೈ ಸವಣೂರು, ರೋಟರಿ ಸುಳ್ಯ ಅಧ್ಯಕ್ಷ ರೊ. ಆನಂದ ಖಂಡಿಗ, ಕಾರ್ಯದರ್ಶಿ ರೊ. ಕಸ್ತೂರಿಶಂಕರ್, ಟ್ರಸ್ಟಿಗಳಾದ ರೊ.ಡಾ.ಪುರುಷೋತ್ತಮ ಕೆ. ಜಿ, ರೊ.ಪ್ರಭಾಕರನ್ ನಾಯರ್, ರೊ.ದಯಾನಂದ ಆಳ್ವ, ರೊ.ಮಹಾಲಕ್ಷ್ಮಿ ಕೊರಂಬಡ್ಕ, ಮಾಜಿ ಅಧ್ಯಕ್ಷರಾದ ರೊ. ಬೆಳ್ಳಿಯಪ್ಪ ಗೌಡ, ರೊ. ಚಂದ್ರಶೇಖರ ಪೇರಾಲ್, ಇಂಜಿನಿಯರ್ ವಿಜಯ ಕುಮಾರ್ ತುದಿಯಡ್ಕ, ಸಮಿತಿ ಕಾರ್ಯದರ್ಶಿ ರೊ.ಹರಿರಾಯ ಕಾಮತ್, ರೊ. ಡಾ.ಕೇಶವ ಪಿ ಕೆ, ರೊ. ಪ್ರಭಾಕರನ್ ಸಿ.ಹೆಚ್. ,
ರೋಟರಿ ಸಿಟಿ ನಿಯೋಜಿತ ಅಧ್ಯಕ್ಷ ರೊ. ಹೇಮಂತ್ ಕಾಮತ್, ರೋಟರಿ ಶಾಲಾ ಕಛೇರಿ ಅಧೀಕ್ಷಕಿ ಶ್ರೀಮತಿ ಚಂದ್ರಾಕ್ಷಿ ಜೆ ರೈ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಟ್ರಸ್ಟ್ ಕಾರ್ಯದರ್ಶಿ ಹಾಗೂ ರೋಟರಿ ಶಾಲಾ ಸಂಚಾಲಕರಾದ ರೊ. ಗಿರಿಜಾಶಂಕರ ತುದಿಯಡ್ಕರವರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.