ಪೈಂಬೆಚ್ಚಾ ಲು ಸರ್ಕಾರಿ ಶಾಲೆಯಲ್ಲಿ ಕಿಡಿಗೇಡಿಗಳ ಕೃತ್ಯ, ಕಚೇರಿಯಲ್ಲಿರುವ ಸಾಮಗ್ರಿಗಳು ಹಾನಿ

0

ಪೈಂಬೆಚ್ಚಾಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಿನ್ನೆ ತಡ ರಾತ್ರಿ ಕಿಡಿಗೇಡಿಗಳು ಕಚೇರಿಯ ಕಿಟಕಿಯಿಂದ ಸಲಾಕೆ ಬಳಸಿ ಕಚೇರಿಯಲ್ಲಿರುವ ಪುಸ್ತಕ ಇನ್ನಿತರ ವಸ್ತುಗಳನ್ನು ಹಾನಿಗೊಳಿಸಿರುವ ಘಟನೆ ವರದಿಯಾಗಿದೆ.

ಕಿಡಿಗೇಡಿಗಳು ಪಕ್ಕದಲ್ಲಿ ಇದ್ದ ಸಿಂಟೆಕ್ಸ್ ನೀರಿನ ಟ್ಯಾಂಕಿಯನ್ನು ತಂದು ಅದರ ಮೇಲೆ ಹತ್ತಿ ಕಿಟಕಿಯನ್ನು ತೆರದು ಮರದ ಸಲಾಕೆಗಳನ್ನು ಬಳಸಿ ಕಚೇರಿಯಲ್ಲಿದ್ದ ಮೇಜಿನ ಡ್ರಾವೆರ್ ನ್ನು ತೆರದು ಅದರಲ್ಲಿ ಇದ್ದ ಪೇಪರ್ ಹಾಗೂ ಮೇಜಿನ ಮೇಲೆ ಇದ್ದ ಪುಸ್ತಕಗಳನ್ನು ಎಳೆದು ಹಾಕಿ ಚೆಲ್ಲಾಪಿಲ್ಲಿ ಮಾಡಿದ್ದಾರೆ.


ಇಂದು ಬೆಳಗ್ಗೆ ಶಿಕ್ಷಕರು ಬಂದು ಬಾಗಿಲು ತೆಗೆಯುವ ಸಂದರ್ಭದಲ್ಲಿ ದುಷ್ಕೃತ್ಯ ಬೆಳಕಿಗೆ ಬಂದಿದೆ. ಯಾವುದೇ ವಸ್ತುಗಳು ಕಳ್ಳತನವಾಗಿಲ್ಲವೆಂದು ತಿಳಿದು ಬಂದಿದೆ.

ದಸರಾ ಪ್ರಯುಕ್ತ ಶಾಲೆಗೆ ರಜೆ ಇದ್ದ ಸಮಯದಲ್ಲಿ ಕಿಡಿಗೇಡಿಗಳು ಪುಂಡಾಟ ಮೆರೆದಿದ್ದಾರೆ ಎಂದು ಸ್ಥಳೀಯರಾಡಿಕೊಳ್ಳುತ್ತಿದ್ದಾರೆ.
ಶಾಲೆಯ ಎಸ್.ಡಿ.ಎಂ.ಸಿ ಹಾಗೂ ಸ್ಥಳೀಯ ಪಂಚಾಯತ್ ಸದಸ್ಯರಿಗೆ ವಿಷಯ ತಿಳಿಸಲಾಯಿತು. ಸ್ಥಳಕ್ಕೆ ಆಗಮಿಸಿದ ಪಂಚಾಯತ್ ಸದಸ್ಯರುಗಳಾದ ಗೀತಾ ಕೋಲ್ಚಾರ್, ಧರ್ಮಪಾಲ ಕೊಯಿಂಗಾಜೆ ಹಾಗೂ ಎಸ್.ಡಿ.ಎಂ.ಸ ಅಧ್ಯಕ್ಷ ಅಬ್ದುಲ್ ಫೈಝಿ ಯವರು ಸುಳ್ಯ ಪೋಲಿಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೋಲೀಸರು ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿ ತಿಳಿದುಬಂದಿದೆ.