ಸುಳ್ಯ ತಾಲೂಕು ಪ್ರಾಥಮಿಕ – ಪ್ರೌಢಶಾಲಾ ಕ್ರೀಡಾಕೂಟ : ಕ್ರೀಡಾ ವಿಕ್ರಮಕ್ಕೆ ಅದ್ದೂರಿ ತೆರೆ

0

ಸೈಂಟ್ ಜೋಸೆಫ್ ಸುಳ್ಯ, ಬಾಳಿಲ ವಿದ್ಯಾಬೋಧಿನಿ, ಎಣ್ಮೂರು ಪ್ರೌಢಶಾಲೆಗೆ ಸಮಗ್ರ ಪ್ರಥಮ

ಸುಳ್ಯ ತಾಲೂಕು ಪ್ರಾಥಮಿಕ ಮತ್ತು ಪ್ರೌಢಶಾಲಾ ಕ್ರೀಡಾಕೂಟ ಅ.26 ಮತ್ತು ಅ.27 ರಂದು ಸುಳ್ಯ ಸೈಂಟ್ ಜೋಸೆಫ್ ಮತ್ತು ಸೈಂಟ್ ಬ್ರಿಜಿಡ್ಸ್ ಶಾಲಾ ನೇತೃತ್ವದಲ್ಲಿ ಸುಳ್ಯದ ಕೊಡಿಯಾಲಬೈಲು ಎಂ.ಜಿ.ಎಂ.ಶಾಲಾ ವಠಾರದಲ್ಲಿ ನಡೆಯಿತು.


ಕ್ರೀಡಾಕೂಟದಲ್ಲಿ ಪ್ರಾಥಮಿಕ ಶಾಲಾ ವಿಭಾಗದ ಸಮಗ್ರ ಪ್ರಥಮ ಪ್ರಶಸ್ತಿಯನ್ನು ಸೈಂಟ್ ಜೋಸೆಫ್ ಸುಳ್ಯ,, ಐವರ್ನಾಡು ದ್ವಿತೀಯ, 14 ರ ಮಯೋಮಾನದಲ್ಲಿ ಸಮಗ್ರ ಪ್ರಥಮ ವಿದ್ಯಾಬೋಧಿನಿ ಬಾಳಿಲ, ಬಳ್ಪ ಶಾಲೆ‌ ದ್ವಿತೀಯ, ಪ್ರೌಢಶಾಲಾ ವಿಭಾಗದಲ್ಲಿ ಸಮಗ್ರ ಪ್ರಥಮ ಎಣ್ಮೂರು ಪ್ರೌಢಶಾಲೆ, ಎನ್ನೆಪಿಯುಸಿ ಅರಂತೋಡು ದ್ವಿತೀಯ ಪ್ರಶಸ್ತಿ ಪಡಕೊಂಡರು.

ಸಮಾರಂಭದ ಅಧ್ಯಕ್ಷತೆಯನ್ನು ಪುತ್ತೂರು ವಲಯ ಶ್ರೇಷ್ಠ ಧರ್ಮಗುರುಗಳಾದ ಲಾರೆನ್ಸ್‌ ಮಸ್ಕರೇನಸ್ ವಹಿಸಿದ್ದರು.

ಸೈಂಟ್ ಬ್ರಿಜಿಡ್ಸ್ ಹಾಗೂ ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯ ಸಂಚಾಲಕ ರೆ.ಫಾ. ವಿಕ್ಟರ್ ಡಿಸೋಜಾ, ಉಬರಡ್ಕ ಗ್ರಾ.ಪಂ. ಉಪಾಧ್ಯಕ್ಷೆ ಚಿತ್ರ ಕುಮಾರಿ, ಸುಳ್ಯ ‌ನಗರ ಪಂಚಾಯತ್ ಸದಸ್ಯ ಎಂ.ವೆಂಕಪ್ಪ ಗೌಡ, ಸುಳ್ಯ ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಚಂದ್ರಾ ಕೋಲ್ಚಾರ್, ಗೌಡರ ಯುವ ಸೇವಾ ಸಂಘದ ಸ್ಥಾಪಕಾಧ್ಯಕ್ಷ ನಿತ್ಯಾನಂದ ಮುಂಡೋಡಿ, ಸೈಂಟ್ ಬ್ರಿಜಿಡ್ಸ್ ಚರ್ಚ್ ನ ಪಾಲನಾ ಸಮಿತಿ ಉಪಾಧ್ಯಕ್ಷ ನವೀನ್ ಮಚಾದೋ, ಎಂ.ಜಿ.ಎಂ. ಶಾಲಾ ಸಂಚಾಲಕ ದೊಡ್ಡಣ್ಣ ಬರೆಮೇಲು, ಸುಳ್ಯ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಪಿ.ಸಿ.ಜಯರಾಮ, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಬಿ.ಈ., ಸುಳ್ಯ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ. ವಿಶ್ವನಾಥ್, ನಗರ ಪಂಚಾಯತ್ ಸದಸ್ಯ ಡೇವಿಡ್ ಧೀರಾ ಕ್ರಾಸ್ತ, ಮಾಜಿ ಸದಸ್ಯೆ ಜೂಲಿಯಾ ಕ್ರಾಸ್ತ, ಶಿಕ್ಷಣ ಸಂಯೋಜಕಿ ಸಂಧ್ಯಾ‌ಕುಮಾರಿ, ಸುದ್ದಿ‌ಬಿಡುಗಡೆ ಪತ್ರಿಕೆಯ ಪ್ರಧಾನ ವರದಿಗಾರ ಹರೀಶ್ ಬಂಟ್ವಾಳ್, ಉಬರಡ್ಕ ಗ್ರಾ.ಪಂ. ಸದಸ್ಯ ಅನಿಲ್‌ ಬಳ್ಳಡ್ಕ, ಶ್ರೀನಾಥ್ ರೈ ಬಾಳಿಲ, ಜಿತೇಂದ್ರ ತಮ್ಮಯ್ಯ, ಸೈಂಟ್ ಬ್ರಿಜಿಡ್ಸ್ ಸಂಸ್ಥೆ, ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯರು ಸಹಿತ‌ ಹಲವು ಗಣ್ಯರು ವೇದಿಕೆಯಲ್ಲಿದ್ದರು.

ಗೌರವ : ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಕೊರಗಪ್ಪ, ದೈಹಿಕ ಶಿಕ್ಷಣ ಶಿಕ್ಷಕಿ ಪುಷ್ಪವೇಣಿ, ಸೈಂಟ್ ಬ್ರಿಜಿಡ್ಸ್ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಉಮೇಶ್ ರನ್ನು ಕ್ರೀಡಾಕೂಟದ ಯಶಸ್ವಿಗಾಗಿ ಗೌರವಿಸಲಾಯಿತು.

ವೈಯಕ್ತಿಕ ಚಾಂಪಿಯನ್ : ಪ್ರಾಥಮಿಕ ಬಾಲಕರ ವಿಭಾಗದಲ್ಲಿ ರೋಟರಿ ಶಾಲೆಯ ತುಷಾರ್, ಏನೆಕಲ್ಲು ಶಾಲೆಯ ಗಗನ್ ವೈಯಕ್ತಿಕ ಚಾಂಪಿಯನ್ ಪಡೆದುಕೊಂಡರು.


ಬಾಲಕಿಯರ ವಿಭಾಗದಲ್ಲಿ ಸೈಂಟ್ ಜೋಸೆಫ್ ‌ನ ಸಿಂಚನಾ, 8 ನೇ ತರಗತಿ‌ ಬಾಲಕರ ವಿಭಾಗ ಬಳ್ಪ ಶಾಲೆಯ ಪ್ರದೀಪ್, ಬಾಲಕಿಯರ ವಿಭಾಗದಲ್ಲಿ ಬಾಳಿಲ ವಿದ್ಯಾಬೋಧಿನಿ ಆಶಾಲತ ನಾಯಕ್, ಕೆಪಿಎಸ್ ಬೆಳ್ಳಾರೆ ಯ ತನ್ವಿ, 17 ವಯೋ ಮಾನ ಎಣ್ಮೂರು ಶಾಲೆಯ ಮಿಲನ್ , ಬಾಳಿಲದ ಗಗನ್, ಬಾಲಕಿಯರ ವಿಭಾಗ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದ ಬಾನವಿ ಪಡೆದುಕೊಂಡರು.

ತಂಡ ಪ್ರಶಸ್ತಿ : ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸೈಂಟ್ ಜೋಸೆಫ್ ಪ್ರಥಮ, ವಿದ್ಯಾಬೋಧಿನಿ‌ ಬಾಳಿಲ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಐವರ್ನಾಡು ಶಾಲೆ, ಸೈಂಟ್ ಜೋಸೆಫ್ ವಿದ್ಯಾಸಂಸ್ಥೆ ಸುಳ್ಯ, ಸೈಂಟ್ ಬ್ರಿಜಿಡ್ಸ್ ಶಾಲೆ ದ್ವಿತೀಯ, 8 ನೇ ತರಗತಿ ಬಾಲಕರ ವಿಭಾಗದಲ್ಲಿ ಬಳ್ಪ ಶಾಲೆ, ದ್ವಿತೀಯ ಸ್ಥಾನ ವಿದ್ಯಾಬೋಧಿನಿ ಶಾಲೆ ಬಾಳಿಲ, ಬಾಲಕಿಯರ ವಿಭಾಗ ಬಾಳಿಲ ವಿದ್ಯಾಬೋಧಿನಿ ಪ್ರಥಮ, ಎಣ್ಮೂರು ಶಾಲೆ ದ್ವಿತೀಯ, ಪ್ರೌಢಶಾಲಾ ಬಾಲಕರ ವಿಭಾಗ ಸರಕಾರಿ ಪ್ರೌಢಶಾಲೆ ಪ್ರಥಮ, ಸರಕಾರಿ ಪ್ರೌಡ ಶಾಲೆ ಎಣ್ಮೂರು, ಬಾಲಕಿಯರ ವಿಭಾಗದಲ್ಲಿ ಎನ್ನೆಂಪಿಯುಸಿ ಅರಂತೋಡು ಪ್ರಥಮ, ಎಣ್ಮೂರು ಹಾಗೂ‌ ಕುಕ್ಕುಜಡ್ಕ ದ್ವಿತೀಯ ಸ್ಥಾನ ಪಡಕೊಂಡರು.

ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸೂಫಿ ಪೆರಾಜೆ ಸ್ವಾಗತಿಸಿದರು. ನಿವೃತ್ತ ಮುಖ್ಯ ಶಿಕ್ಷಕ ಅಚ್ಚುತ ಅಟ್ಲೂರು ಕಾರ್ಯಕ್ರಮ ನಿರೂಪಿಸಿದರು.