ತಂದೆ ಸಿರಿಯಾಕ್ ಮ್ಯಾಥ್ಯೂ ಮೂರು ತಿಂಗಳಿನಿಂದ ನಾಪತ್ತೆ: ನೊಂದ ಮಗ ಆತ್ಮಹತ್ಯೆಗೆ ಶರಣು
ಗುತ್ತಿಗಾರಿನ ಆಚಳ್ಳಿಯ ಸಿರಿಯಾಕ್ ಮ್ಯಾಥ್ಯೂ ರವರ ಮಗ ಸೈಬಿನ್ ಸಿರಿಯಾಕ್ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಸಂಜೆ ನಡೆದಿದೆ.
ಸಿರಿಯಾಕ್ ಮ್ಯಾಥ್ಯೂ ರವರು ಮೂರು ತಿಂಗಳ ಹಿಂದೆ ಕಾಣೆಯಾಗಿದ್ದು ಆ ಬಳಿಕ ಸೈಬಿನ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದರೆನ್ನಲಾಗಿದೆ.
ಐದು ವರ್ಷದ ಹಿಂದೆ ಮೃತಪಟ್ಟ ಸೈಬಿನ್ ತಾಯಿಯ ವರ್ಷಾಂತಿಕ ಕಾರ್ಯಕ್ರಮ ನಾಳೆ ನಡೆಯಲಿದ್ದು, ಇಂದು ಈ ದುರ್ಘಟನೆ ನಡೆದಿದೆ.
ಇಂದು ಸಂಜೆ ಕೊಟ್ಟಿಗೆಯಲ್ಲಿ ಸೈಬಿನ್ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳದಲ್ಲಿ ಸ್ಥಳೀಯರು ಜಮಾಯಿಸಿದ್ದು, ಪೋಲೀಸರು ಆಗಮಿಸಿರುವುದಾಗಿ ತಿಳಿದು ಬಂದಿದೆ.
ಮೃತ ಸೈಬಿನ್ ಪತ್ನಿ, ಓರ್ವ ಪುತ್ರ ಹಾಗೂ ಬಂಧುಗಳನ್ನು ಅಗಲಿದ್ದಾರೆ