ಆಲೆಟ್ಟಿ:ಗುಂಡ್ಯ ಜನನಿ ಫ್ರೆಂಡ್ಸ್ ಕ್ಲಬ್ ನವರ ದ್ವಿತೀಯ ವರ್ಷದ ಸ್ತಬ್ಧ ಚಿತ್ರದ ಕಲಾ ಕಾಣಿಕೆಗೆ ಚಾಲನೆ

0

ಸುಳ್ಯ ದಸರಾ ಉತ್ಸವ 2023 ರ ಶ್ರೀ ಶಾರದಾ ಮಾತೆಯ ವೈಭವದ ಶೋಭಾ ಯಾತ್ರೆಗೆ ಆಲೆಟ್ಟಿಯ ಗುಂಡ್ಯ ಜನನಿ ಫ್ರೆಂಡ್ಸ್ ಕ್ಲಬ್ ವತಿಯಿಂದ ದ್ವಿತೀಯ ವರ್ಷದ ಕಲಾ ಕಾಣಿಕೆಯ ಸ್ಥಬ್ಧ ಚಿತ್ರದ ಟ್ಯಾಬ್ಲೋಗೆ ಆಲೆಟ್ಟಿ ಸದಾಶಿವ ದೇವಸ್ಥಾನದ ದ್ವಾರದ ಬಳಿ ಚಾಲನೆ ನೀಡಲಾಯಿತು.

ಆಲೆಟ್ಟಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವೀಣಾ ವಸಂತ ಆಲೆಟ್ಟಿ ಆರತಿ ಬೆಳಗಿದರು. ಸದಾಶಿವ ದೇವಸ್ಥಾನದ ವ್ಯ‌ಸ.ಸದಸ್ಯ ಅಚ್ಚುತ ಮಣಿಯಾಣಿ ಯವರು ತೆಂಗಿನಕಾಯಿಯ ಒಡೆಯುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಆಲೆಟ್ಟಿ ಸೊಸೈಟಿ ಉಪಾಧ್ಯಕ್ಷ ಸುಧಾಕರ ಆಲೆಟ್ಟಿ, ದೇವಸ್ಥಾನದ ಸೇವಾ ಸಮಿತಿ ಕಾರ್ಯದರ್ಶಿ ರಾಮಚಂದ್ರ ಆಲೆಟ್ಟಿ ಉಪಸ್ಥಿತರಿದ್ದರು. ಕ್ಲಬ್ ಅಧ್ಯಕ್ಷ ತೀರ್ಥಕುಮಾರ್ ವಾಲ್ತಾಜೆ, ಗೌರವಾಧ್ಯಕ್ಷ ನಿತಿನ್ ಗುಂಡ್ಯ, ಕಾರ್ಯದರ್ಶಿ ನಾಗರಾಜ್ ಬಡ್ಡಡ್ಕ, ಕೋಶಾಧಿಕಾರಿ ವಿಷ್ಣು ಪ್ರಸಾದ್ ಗುಂಡ್ಯ ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.