ಆಲೆಟ್ಟಿ ಗ್ರಾಮ ಪಂಚಾಯತ್ ಗೆ ನೂತನ ಪಿ.ಡಿ.ಓ. ಆಗಿ ಉಜಿರೆಯ ಪ್ರಕಾಶ್ ಶೆಟ್ಟಿ

0

ಆಲೆಟ್ಟಿ ಗ್ರಾಮ ಪಂಚಾಯತ್ ಗೆ ನೂತನ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಉಜರೆ ಗ್ರಾ.ಪಂ. ಪಿ.ಡಿ.ಓ. ಪ್ರಕಾಶ್ ಶೆಟ್ಟಿ ನೊಚ್ಚವರಿಗೆ ಆದೇಶವಾಗಿರುವುದಾಗಿ ತಿಳಿದು ಬಂದಿದೆ.
ಆಲೆಟ್ಟಿ ಗ್ರಾ.ಪಂ.ನಲ್ಲಿ ಪಿ.ಡಿ.ಓ. ಆಗಿದ್ದ ಕೀರ್ತಿ ಪ್ರಸಾದ್ ರವರು ಕಳೆದ ಎರಡು ತಿಂಗಳ ಹಿಂದೆ ಪಂಜ ಪಂಚಾಯತ್ ಗೆ ವರ್ಗಾವಣೆಯಾಗಿದ್ದರು.

ಅವರ ಸ್ಥಾನವನ್ನು ಪ್ರಭಾರ ಪಿ.ಡಿ.ಒ. ಆಗಿ ಕಾರ್ಯದರ್ಶಿ ಸೃಜನ್ ಎ.ಜಿ ಅಧಿಕಾರ ವಹಿಸಿಕೊಂಡಿದ್ದರು. ಇದೀಗ ಆಲೆಟ್ಟಿ ಗ್ರಾ.ಪಂ.ಗೆ ನೂತನ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಉಜಿರೆಯ ಪ್ರಕಾಶ್ ಶೆಟ್ಟಿ ಯವರಿಗೆ ಆದೇಶವಾಗಿರುವುದಾಗಿ ತಿಳಿದು ಬಂದಿದೆ. ಅವರು ಇನ್ನಷ್ಟೆ ಬಂದು ಅಧಿಕಾರ ವಹಿಸಿ ಕೊಳ್ಳಬೇಕಾಗಿದೆ.