ಸಂಪಾಜೆ : ವಾಹನ ಅಪಘಾತಕ್ಕೆ ಆಡು ಬಲಿ

0

ವಾಹನ ಅಪಘಾತಕ್ಕೆ ಆಡು ಮೃತಪಟ್ಟ ಘಟನೆ ಸಂಪಾಜೆ ಗ್ರಾಮದ ಕಡೆಪಾಲದಲ್ಲಿ ನ.3ರಂದು ಮುಂಜಾನೆ ಸಂಭವಿಸಿದೆ.
ಕಡೆಪಾಲ ಸೇತುವೆ ಬಳಿಯ ವರ್ಗೀಸ್ ಅವರ ಅಂಗಡಿಯ ಬಳಿ ಮುಖ್ಯರಸ್ತೆಯಲ್ಲಿ ಈ ಘಟನೆ ಸಂಭವಿಸಿದ್ದು, ವಾಹನ ಢಿಕ್ಕಿಯಾದ ರಭಸಕ್ಕೆ ಆಡು ರಸ್ತೆಗೆ ಎಸೆಯಲ್ಪಟ್ಟು, ಗಂಭೀರವಾಗಿ ಗಾಯಗೊಂಡು, ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಕಡೆಪಾಲದ ಈ ಪರಿಸರದಲ್ಲಿ ಪ್ರತಿದಿನ ಅಡಿನ ಗುಂಪು ಮುಖ್ಯ ರಸ್ತೆಯಲ್ಲಿ ನಿಲ್ಲುತ್ತಿದ್ದು, ವಾಹನ ಸವಾರರಿಗೆ ಸಮಸ್ಯೆಯಾಗುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ.