ಮಂಡೆಕೋಲು : ಯಾದವ ಸಭಾ ಮಹಿಳಾ ವೇದಿಕೆಯ ವಾರ್ಷಿಕೋತ್ಸವ

0


ಯಾದವಸಭಾ ಕೇಂದ್ರ ಸಮಿತಿ ಮಂಗಳೂರು, ಯಾದವಸಭಾ ತಾಲೂಕು ಸಮಿತಿ ಸುಳ್ಯ, ಯಾದವಸಭಾ ಪ್ರಾದೇಶಿಕ ಸಮಿತಿ ಮಂಡೆಕೋಲು ಸಂಯುಕ್ತ ಆಶ್ರಯದಲ್ಲಿ ಮಂಡೆಕೋಲು ಯಾದವ ಸಭಾ ಸಮುದಾಯ ಭವನದಲ್ಲಿ ನಡೆದ ಯಾದವಸಭಾ ಮಹಿಳಾ ವೇದಿಕೆ ಮಂಡೆಕೋಲು ಇದರ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು.
ಶಾಸಕಿ ಭಾಗೀರಥಿ ಮುರುಳ್ಯರವರು ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.

ವೇದಿಕೆಯಲ್ಲಿ ಶಾರದಾ ರಾಮನ್, ಸದಾನಂದ ಕಾವೂರು, ಕರುಣಾಕರ ಹಾಸ್ಪಾರೆ, ಪ್ರತಿಮಾ ಹೆಬ್ಬಾರ್, ಅಪ್ಪಯ್ಯ ಮಣಿಯಾಣಿ, ಉಷಾ ಗಂಗಾಧರ, ರಾಮಚಂದ್ರ ಮಾಸ್ತರ್ ಕೇನಾಜೆ , ರಾಜೀವಿ ಪರ್ಲಿಕಜೆ, ಶಾರದಾ ರಾಧಾಕೃಷ್ಣ ಉಪಸ್ಥಿತರಿದ್ದರು.