ಸುಳ್ಯದಲ್ಲಿ ಆದಿದ್ರಾವಿಡರ ಸಮ್ಮಿಲನ, ಅಭಿನಂದನೆ, ಸನ್ಮಾನ

0


ಆದಿದ್ರಾವಿಡ ಯುವ ವೇದಿಕೆ ದ.ಕ. ಜಿಲ್ಲೆ ಹಾಗೂ ಆದಿದ್ರಾವಿಡ ಯುವ ವೇದಿಕೆ ಸುಳ್ಯ ತಾಲೂಕು ಸಮಿತಿ ಮತ್ತು ಮಹಿಳಾ ಸಮಿತಿ ಇದರ ಆಶ್ರಯದಲ್ಲಿ ಸುಳ್ಯ ಕೆ.ವಿ.ಜಿ. ಪುರಭವನ ದಲ್ಲಿ ೨ನೇ ವರ್ಷದ ಆದಿದ್ರಾವಿಡ ಸಮ್ಮಿಲನ ಮತ್ತು ವಿದ್ಯಾರ್ಥಿಗಳಿಗೆ ಅಭಿನಂದನೆ, ಸನ್ಮಾನ ಹಾಗೂ ಸಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯರವರು ದೀಪ ಬೆಳಗಿಸಿ ಉದ್ಘಾಟಿಸಿದರು.