ಮರ್ಕಂಜ : ಭಾರೀ ಸಿಡಿಲು ಮಳೆ – ಮನೆಯ ವಿದ್ಯುತ್ ಪರಿಕರಗಳಿಗೆ ಹಾನಿ

0

ಇಂದು ಸಂಜೆಯ ವೇಳೆಗೆ ಸುರಿದ ಭಾರೀ ಮಿಂಚು ಸಿಡಿಲು ಸಹಿತ‌ ಮಳೆಗೆ ಮರ್ಕಂಜ ಗ್ರಾಮದ ಮುಂಡೋಡಿ‌ ಗುರುವ ಎಂಬವರ ಮನೆಯ ಬಲ್ಬ್ ಗಳು ಸೇರಿದಂತೆ ವಿದ್ಯುತ್ ಪರಿಕರಕ್ಕೆ‌ ಹಾನಿಯಾಗಿರುವುದಾಗಿ ತಿಳಿದು ಬಂದಿದೆ.

ಅದೃಷ್ಟವಶಾತ್ ಮನೆಯವರಿಗೆ ಯಾವುದೇ ಅಪಾಯ ಸಂಭವಿಸಿಲ್ಲವೆಂದು ತಿಳಿದು ಬಂದಿದೆ. ಅಲ್ಲದೇ ಈ ಭಾಗದ ಇನ್ನೂ ಹಲವು ಮನೆಗಳ ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿರುವುದಾಗಿ ತಿಳಿದು ಬಂದಿದೆ.