ಇಂದು (ನ.12) ಸದಾಸಿದ್ಧಿ ಮಿತ್ರ ಬಳಗ ಬೀದಿಗುಡ್ಡೆ ಆಶ್ರಯದಲ್ಲಿ ದೀಪಾವಳಿ ಪ್ರಯುಕ್ತ ವಿವಿಧ ವೈವಿಧ್ಯಮಯ ಕಾರ್ಯಕ್ರಮ

0

ಸದಾಸಿದ್ಧಿ ಮಿತ್ರ ಬಳಗ ಬೀದಿಗುಡ್ಡೆ ಆಶ್ರಯದಲ್ಲಿ 20ನೇ ವರ್ಷದ ದೀಪಾವಳಿ ಹಬ್ಬದ ಪ್ರಯುಕ್ತ ಇಂದು ನ.12 ರಂದು ಬೀದಿಗುಡ್ಡೆ ಶಾಲಾ ವಠಾರದಲ್ಲಿ ವಿವಿಧ ವೈವಿದ್ಯಮಯ ಕಾರ್ಯಕ್ರಮಗಳು ಜರುಗಲಿವೆ.

ಸಂಜೆ ಗಂಟೆ 6:00 ರಿಂದ
ಸದಾಸಿದ್ದಿ ಮಿತ್ರ ಬಳಗದಿಂದ
ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ನಡೆಯಲಿದೆ.
ಬಳಿಕ ಡ್ಯಾನ್ಸ್ & ಬೀಟ್ಸ್ ನೃತ್ಯ ಕಲಾ ಕೇಂದ್ರ ಜೀವನ್ ಬೆಳ್ಳಾರೆ
ನಿರ್ದೇಶನದಲ್ಲಿ “ನೃತ್ಯ ವೈವಿಧ್ಯ” ಕಾರ್ಯಕ್ರಮ ನಡೆಯಲಿದೆ.
ಆ ಬಳಿಕ ಶಿವಾನಂದ ಶೆಟ್ಟಿ ಮಂಗಲ್ಪಾಡಿ ಸಾರಥ್ಯದಲ್ಲಿ ದೀಪಕ್ ರೈ ಪಾಣಾಜೆ ಅಭಿನಯದ, ಸೋಮನಾಥ ಶೆಟ್ಟಿ ಮಂಗಲ್ಪಾಡಿ ರಚಿಸಿ, ಸುಂದರ ರೈ ಮಂದಾರ ನಿರ್ದೇಶಿಸಿ ಅಭಿನಯಿಸಿದ ಹಾಸ್ಯಯುತ ಸಾಮಾಜಿಕ ನಾಟಕ “ಅಮ್ಮೆರ್” ಪ್ರದರ್ಶನಗೊಳ್ಳಲಿದೆ.