ಸುಳ್ಯ ತಾಲೂಕು ಯಾದವ ಸಮಾವೇಶದ ಕುರಿತು ಪೂರ್ವಭಾವಿ ಸಭೆ

0

ಸುಳ್ಯ ತಾಲೂಕು ಯಾದವ ಸಮಾವೇಶ -2023ರ ಕುರಿತು ಪೂರ್ವಭಾವಿ ಸಭೆಯು ತಾಲೂಕು ಸಮಿತಿ ಅಧ್ಯಕ್ಷ ಕರುಣಾಕರ ಹಾಸ್ಪಾರೆ ಅವರ ಅಧ್ಯಕ್ಷತೆಯಲ್ಲಿ ನ.12ರಂದು ಸುಳ್ಯ ಶಿವಕೃಪಾ ಕಲಾಮಂದಿರದಲ್ಲಿ ಜರುಗಿತು.

ಸುಳ್ಯ ತಾಲೂಕು ಯಾದವ ಸಮಾವೇಶ 2023 ಡಿ. 25ರಂದು ಶಿವಕೃಪಾ ಕಲಾಮಂದಿರದಲ್ಲಿ ಜರುಗಲಿದ್ದು, ಸಭೆಯಲ್ಲಿ ಸುಳ್ಯ ತಾಲೂಕು ಘಟಕದ ಎಲ್ಲಾ ಒಂಭತ್ತು ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳು, ಮಹಿಳಾ ಘಟಕದ ಪದಾಧಿಕಾರಿಗಳು, ಯುವ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದು, ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.
ತಾಲೂಕು ಸಮಿತಿ ಕಾರ್ಯದರ್ಶಿ ಕೃಷ್ಣ ಬೆಟ್ಟ ಸ್ವಾಗತಿಸಿ, ಕೋಶಾಧಿಕಾರಿ ದಾಮೋದರ ಕೇನಾಜೆ ವಂದಿಸಿದರು.