ರಾಷ್ಟ್ರೀಯ ಎ ಗ್ರೇಡ್ ಕಬಡ್ಡಿ ಪಂದ್ಯಾಟದಸುಳ್ಯ ಕಬಡ್ಡಿ ಉತ್ಸವಕ್ಕೆ ಅದ್ದೂರಿಯ ಚಾಲನೆ

0

ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ಕಬಡ್ಡಿ ಪಂದ್ಯಾಟವನ್ನು ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ರಾಕೇಶ್ ಮಲ್ಲಿ ಯವರು ದೀಪ ಪ್ರಜ್ವಲಿಸಿ ಚಾಲನೆ ನೀಡಿದರು.

ಧ್ವನಿ, ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘ ಸುಳ್ಯ ಹಾಗೂ ರಾಷ್ಟ್ರೀಯ ‘ಎ’ ಗ್ರೇಡ್ ಮ್ಯಾಟ್ ಕಬ್ಬಡಿ ಪಂದ್ಯಾಟ ಸಂಘಟನಾ ಸಮಿತಿ ಆಶ್ರಯದಲ್ಲಿ, ರಾಷ್ಟ್ರೀಯ ಅಮೆಚೂರ್ ಕಬಡ್ಡಿ ಫೆಡರೇಶನ್ ಮತ್ತು ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ಬಳಿಯ ಪ್ರಭು ಮೈದಾನದಲ್ಲಿ ನ. 17,18 ಮತ್ತು 19ರಂದು ನಡೆಯುತ್ತಿರುವ ರಾಷ್ಟ್ರೀಯ ‘ಎ’ ಗ್ರೇಡ್ ಮ್ಯಾಟ್ ಕಬ್ಬಡಿ ಚಾಂಪಿಯನ್ ಶಿಪ್ 2023, ‘ಸುಳ್ಯ ಕಬ್ಬಡಿ ಉತ್ಸವದ ಪಥ ಸಂಚಲವನ್ನು ದಕ್ಷಿಣ ಆಫ್ರಿಕಾದಲ್ಲಿ ಉದ್ಯಮಿಯಾಗಿರುವ ಪುತ್ತೂರಿನ ಡಾ. ಅಶ್ರಫ್ ಕಮ್ಮಾಡಿಯವರು ಚಾಲನೆ ನೀಡಿದರು.

ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ. ಸಿ. ಆರಂಭದ ಪಂದ್ಯಾಟಕ್ಕೆ ಕ್ರೀಡಾಂಗಣದಲ್ಲಿ ತಂಡಗಳಿಗೆ ಶುಭ ಹಾರೈಸಿ‌ ಚಾಲನೆ ನೀಡಿದರು.


ಮಂಗಳೂರಿನ ಕರಾವಳಿ ಎಂಟರ್ ಪ್ರೈಸಸ್ ನ ಅಬ್ದುಲ್ ರಶೀದ್, ಗೂನಡ್ಕದ ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಡಾ. ಉಮ್ಮರ್ ಬೀಜದಕಟ್ಟೆ, ಮಂಗಳೂರಿನ ಜನ್ನತ್ ಕನ್ಸ್ಟ್ರಕ್ಷನ್ ನ ಅಬುಸಾಲಿ, ಲಯನ್ಸ್ ಜಿಲ್ಲಾ ಮಾಜಿ ರಾಜಪಾಲ ಎಂ. ಬಿ. ಸದಾಶಿವ, ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಪಿ. ಬಿ. ಸುಧಾಕರ್ ರೈ , ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ಎನ್.ಎ. ರಾಮಚಂದ್ರ, ಎಂ. ವೆಂಕಪ್ಪ ಗೌಡ, ಸಂಶುದ್ದೀನ್ ಎಸ್, ಸುಳ್ಯ ತಾಲೂಕು ಅಮೆಚೂರು ಕಬ್ಬಡಿ ಅಸೋಸಿಯೇಷನ್ ಅಧ್ಯಕ್ಷ ಬಿ.ಕೆ. ಮಾಧವ, ದೇರ್ಲಕಟ್ಟೆಯ ಉದ್ಯಮಿ ಇಸ್ಮಾಯಿಲ್, ಕರ್ನಾಟಕ ರಾಜ್ಯ ಶಾಮಿಯಾನ ಡೆಕೋರೇಷನ್ ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಲಕ್ಷ್ಮಣ್ ಆರ್, ರಾಜ್ಯ ಕಾರ್ಯದರ್ಶಿಯಾದ ಮಂಜುನಾಥ ಸಿದ್ದಲಿಂಗಪ್ಪ, ದಕ್ಷಿಣ ಕನ್ನಡ ಜಿಲ್ಲಾ ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷರಾದ ಬಾಬು ಕೆ., ಧ್ವನಿ ಬೆಳಕು ಮತ್ತು ದೀಪಾಲಂಕಾರ ಮಾಲಕರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ, ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಪಿ.ಸಿ. ಜಯರಾಮ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಸ್. ಎನ್‌ ಮನ್ಮಥ, ಸುಳ್ಯ ನಗರ ಪಂಚಾಯತ್ ಅರಂತೋಡು ತೆಕ್ಕೆಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ. ಶಾಹಿದ್ ತೆಕ್ಕಿಲ್, ಉಬರಡ್ಕ ಗ್ರಾ. ಪಂ. ಸದಸ್ಯ ಹರೀಶ್ ರೈ ಉಬರಡ್ಕ, ಸುಳ್ಯ ನಗರ ಪಂಚಾಯತ್ ಸದಸ್ಯರಾದ ಕಿಶೋರಿ ಶೇಟ್ ಹಾಗೂ ಸಂಘದ ಸುಳ್ಯದ ಗೌರವ ಸಲಹೆಗಾರರಾದ ಜಿ.ಜಿ. ನಾಯಕ್, ಕಾನೂನು ಸಲಹೆಗಾರರಾದ ಮಹೇಶ್ ಎನ್., ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ರಾಷ್ಟ್ರೀಯ ‘ಏ ‘ಗ್ರೇಡ್ ಮ್ಯಾಟ್ ಕಬ್ಬಡಿ ಪಂದ್ಯಾಟದ ಸಂಘಟನಾ ಸಮಿತಿಯ ಅಧ್ಯಕ್ಷರಾದ ಸಂಶುದ್ಧೀನ್ ಜಿ.ಪಿ., ಸಂಯೋಜಕರಾದ ರಾಜೇಶ್ ಎಂ. ಎಸ್. ಉಪಾಧ್ಯಕ್ಷ ವಿಶ್ವನಾಥ್ ಭಾರದ್ವಾಜ್, ಉಪಾಧ್ಯಕ್ಷ ಶಾಪಿ ಪ್ರಗತಿ,ಪ್ರಧಾನ ಕಾರ್ಯದರ್ಶಿ ಶರತ್ ಎಣ್ಮೂರು, ಕಾರ್ಯದರ್ಶಿ ಗುರುದತ್ ನಾಯಕ್, ಜೊತೆ ಕಾರ್ಯದರ್ಶಿ ಶಿವಪ್ರಸಾದ್, ಖಜಾಂಜಿ ಜಯಪ್ರಕಾಶ್ ಜೊತೆ ಖಜಾಂಚಿ ಅಬ್ದುಲ್ ರಜಾಕ್ ಹಾಗೂ ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷರಾದ ಶಿವಪ್ರಕಾಶ್ ಕಾರ್ಯದರ್ಶಿ ಸತೀಶ್ ಕಲ್ಲುಗುಂಡಿ, ಖಜಾಂಜಿ ಜಿಎ ಮಹಮ್ಮದ್ ಅವರು ಉಪಸ್ಥಿತರಿದ್ದರು.
ನ.17 ರಂದು ಆರಂಭಗೊಂಡ ಪಂದ್ಯದಲ್ಲಿ 8 ತಂಡಗಳ ಮಧ್ಯೆ ಪಂದ್ಯಾಟ ನಡೆಯಲಿದೆ.

ನ. 18 ಮತ್ತು 19 ರಂದು ಪ್ರತಿದಿನ ಸಂಜೆ 5:00 ಗಂಟೆಯಿಂದ ಆರಂಭಗೊಳ್ಳುವ ಈ ಹೊನಲು ಬೆಳಕಿನ ರಾಷ್ಟ್ರೀಯ ಮಟ್ಟದ ‘ಎ’ ಗ್ರೇಡ್ ಮ್ಯಾಟ್ ಕಬಡ್ಡಿ ಪಂದ್ಯಾಟದಲ್ಲಿ ರಾಷ್ಟ್ರಮಟ್ಟದ ಸುಮಾರು16 ತಂಡಗಳು ಭಾಗವಹಿಸಿ ಸೆಣಸಾಟ ನಡೆಸಲಿವೆ.