ರಾಷ್ಟ್ರೀಯ ಕಬಡ್ಡಿ ಪಂದ್ಯಾಟ: ಎರಡನೇ ಪಂದ್ಯಾಟದಲ್ಲಿ ಪಾಂಡಿಚೇರಿ ತಂಡವನ್ನು ಸೋಲಿಸಿದ ಬೆಂಗಳೂರು ನ್ಯಾಷನಲ್ ತಂಡ

0

ಸುಳ್ಯದಲ್ಲಿ ನಡೆಯುತ್ತಿರುವ ಪ್ರೋ ಮಾದರಿಯ ರಾಷ್ಟ್ರೀಯ ಮಟ್ಟದ ಮೂರು ದಿನಗಳ ಪುರುಷರ ಮತ್ತು ಮಹಿಳೆಯರ ಪ್ರೊ ಮಾದರಿಯ ಕಬಡ್ಡಿ ಪಂದ್ಯಾಟದ ಮಹಿಳಾ ಕಬ್ಬಡಿ ಪಂದ್ಯಾಟದ ಎರಡನೇ ಪಂದ್ಯ ನ್ಯಾಷನಲ್ ಬೆಂಗಳೂರು ಮತ್ತು ಪಾಂಡಿಚೇರಿ ತಂಡದ ನಡುವೆ ನಡೆಯಿತು.

ಈ ಪಂದ್ಯಾಟದಲ್ಲಿ ಬೆಂಗಳೂರು ನ್ಯಾಷನಲ್ ತಂಡ ಪಾಂಡಿಚೇರಿ ತಂಡವನ್ನು ಸೋಲಿಸಿ ಗೆಲುವು ತನ್ನದಾಗಿಸಿಕೊಂಡಿತು. ಬೆಂಗಳೂರು ತಂಡದ ಆಟಗಾರ್ತಿ ಲಕ್ಷ್ಮಿ ಉತ್ತಮ ರೈಡ್ ಮಾಡುವ ಮೂಲಕ ತಂಡಕ್ಕೆ ಹೆಚ್ಚಿನ ಅಂಕವನ್ನು ತಂದುಕೊಟ್ಟರು.

ಮೊದಲಿಗೆ ಎರಡೂ ತಂಡಗಳು ಉತ್ತಮ ಪ್ರದರ್ಶನ ನೀಡಿದರೆ ಬಳಿಕ ಪಾಂಡಿಚೇರಿ ತಂಡವು ಬೆಂಗಳೂರು ನ್ಯಾಷನಲ್ ತಂಡದ ಬಲಿಷ್ಠ ಆಟಗಾರ್ತಿಯರ ನಡುವೆ ಯಾವುದೇ ಪ್ರತಿರೋಧ ನಡೆಸಲು ಸಾಧ್ಯವಾಗದೆ ಸೋಲೊಪ್ಪಿಕೊಂಡಿತು.

ಬೆಂಗಳೂರು ನ್ಯಾಷನಲ್ ತಂಡ 34-18 ಅಂಕಗಳಿಂದ ಪಾಂಡಿಚೇರಿ ತಂಡವನ್ನು ಸೋಲಿಸಿ ಗೆಲುವು ತಮ್ಮದಾಗಿಸಿಕ್ಕೊಂಡಿತು.