ಎನ್ನೆಂಸಿ ಗ್ರಂಥಾಲಯ ಕಾರ್ಯಗಾರ

0

ಗ್ರಂಥಾಲಯಗಳು ಶಿಕ್ಷಣ ಸಂಸ್ಥೆಗಳ ಆತ್ಮ: ಪ್ರೊ. ಬಾಲಚಂದ್ರ ಗೌಡ

ಗ್ರಂಥಾಲಯಗಳ ಬಳಕೆ ಹೆಚ್ಚಿದಂತೆಲ್ಲ ನಮ್ಮ ಬೌದ್ಧಿಕ ಮಟ್ಟ ಹೆಚ್ಚುತ್ತದೆ ಮತ್ತು ಒಂದು ಒಳ್ಳೆಯ ಗ್ರಂಥಾಲಯ ಆ ಸಂಸ್ಥೆಯ ಆತ್ಮವಿದ್ದಂತೆ ಎಂದು ಎನ್ನೆಂಸಿಯ ನಿವೃತ್ತ ಪ್ರಾಂಶುಪಾಲ ಮತ್ತು ಶೈಕ್ಷಣಿಕ ಸಲಹೆಗಾರರಾದ ಪ್ರೊ. ಬಾಲಚಂದ್ರ ಗೌಡ ಹೇಳಿದರು.

ನೆಹರು ಸ್ಮಾರಕ ಮಹಾವಿದ್ಯಾಲಯದ ಗ್ರಂಥಾಲಯ ವಿಭಾಗ ಮತ್ತು ಐಕ್ಯೂಏಸಿ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ನಡೆದ ಒಂದು ದಿನದ ಗ್ರಂಥಾಲಯ ಮಾಹಿತಿ ಕಾರ್ಯಾಗಾರದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಹಿಂದಿನ ಕಾಲದಲ್ಲಿ ಗ್ರಂಥಾಲಯಗಳು ಹಾಗೂ ಅದರ ಸೇವೆಗಳು ಬಹಳ ದುರ್ಲಭವಾಗಿತ್ತು ಮತ್ತು ಈಗ ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯಿಂದ ಎಲ್ಲಾ ಮಾಹಿತಿಗಳು ಕ್ಷಣಮಾತ್ರದಲ್ಲಿ ದೊರೆಯುವಂತಾಗಿದೆ. ಗ್ರಂಥಾಲಯಗಳ ಬಳಕೆ ಹೆಚ್ಚಾದಂತೆ ನಮ್ಮ ಮನೋವಿಕಾಸವಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರುದ್ರಕುಮಾರ್ ಎಂ.ಎಂ. ಮಾತನಾಡಿ, ಗ್ರಂಥಾಲಯದ ಮಹತ್ವ ಮತ್ತು ಅದರ ಸದ್ಬಳಕೆಯ ಬಗ್ಗೆ ವಿವರವಾದ ಅನುಭವಗಳನ್ನು ಹಂಚುತ್ತಾ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ಕಿಯಾಗಿ, ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇದರ ಆಯ್ಕೆ ಶ್ರೇಣಿ ಗ್ರಂಥಪಾಲಕರಾದ ಶ್ರೀ ರಾಮ ಕೆ. ಇವರು ‘Insights on NLIST, NDLI and SWAYAM’ ಎಂಬ ವಿಷಯದ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಮಾಹಿತಿ ಕಾರ್ಯಾಗಾರದ ಕಾರ್ಯಕ್ರಮ ನಿರ್ದೇಶಕರಾದ ಪ್ರೊ. ಶ್ರೀಧರ ವಿ., ಹಾಗೂ ಮಾಹಿತಿ ಕಾರ್ಯಾಗಾರದ ಸಂಯೋಜಕರಾದ ಶ್ರೀ ಉಮೇಶ್ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಹಿತಿ ಕಾರ್ಯಗಾರದಲ್ಲಿ ದ್ವಿತೀಯ ಬಿಕಾಂ ವಿದ್ಯಾರ್ಥಿನಿ ಪದ್ಮಶ್ರೀ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಅಂತಿಮ ಬಿಕಾಂ ವಿದ್ಯಾರ್ಥಿನಿ ರತ್ನಸಿಂಚನ ಬಳಗದವರು ಪ್ರಾರ್ಥನೆಗೈದರು, ಕಾಲೇಜು ವಿದ್ಯಾರ್ಥಿ ನಾಯಕ ತೃತೀಯ ಬಿಕಾಂ ವಿದ್ಯಾರ್ಥಿ ಜೊಸ್ಬಿನ್ ಬಾಬು ಸ್ವಾಗತಿಸಿ, ದ್ವಿತೀಯ ಬಿಕಾಂ ವಿದ್ಯಾರ್ಥಿನಿ ಅಂಕಿತಾ ಅತಿಥಿಗಳನ್ನು ಪರಿಚಯಿಸಿ, ದ್ವಿತೀಯ ಬಿಕಾಂ ವಿದ್ಯಾರ್ಥಿ ಕೀರ್ತನ್ ವಂದಿಸಿದರು. ಕಾಲೇಜಿನ ಐಕ್ಯುಏಸಿ ಸಂಯೋಜಕಿ ಡಾ. ಮಮತಾ ಕೆ., ಪ್ರೊ. ಡಿ.ಎಚ್. ತಿಪ್ಪೇಸ್ವಾಮಿ, ಪ್ರೊ.ಸತ್ಯಪ್ರಕಾಶ್, ಹಿರಿಯ ಉಪನ್ಯಾಸಕರಾದ ಕುಲದೀಪ್ ಪಿ.ಪಿ., ವಿಷ್ಣುಪ್ರಶಾಂತ್, ಅಜಿತ್ ಕುಮಾರ್, ಶ್ರೀಮತಿ ಚಿತ್ರಲೇಖ ಮತ್ತು ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತವಿರಿದ್ದು ಮಾಹಿತಿ ಕಾರ್ಯಾಗಾರದ ಪ್ರಯೋಜನ ಪಡೆದರು.