ಪೆರಾಜೆ : ಕೃಷಿ ಮತ್ತು ಪೌಷ್ಟಿಕ ಆಹಾರ ಮೇಳ

0

ಕರ್ನಾಟಕ ರಾಜ್ಯ ರೈತ ಸಂಘ ಗ್ರಾಮ‌ ಘಟಕ ಪೆರಾಜೆ ಮತ್ತು ಸಂಜೀವಿನಿ ಒಕ್ಕೂಟ ಪೆರಾಜೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಕೃಷಿ ಮತ್ತು ಪೌಷ್ಟಿಕ ಆಹಾರ ಮೇಳ‌ ಹಾಗೂ ಮಾಹಿತಿ ಕಾರ್ಯಕ್ರಮ ಜ್ಯೋತಿ ಪ್ರೌಢಶಾಲೆ ಸಭಾಂಗಣದಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ರೈತ ಸಂಘದ ಅಧ್ಯಕ್ಷ ಮುಡ್ಕಜೆ ಹರೀಶ್ಚಂದ್ರ ವಹಿಸಿದ್ದರು. ಗ್ರಾ.ಪಂ. ಅಧ್ಯಕ್ಷೆ ಚಂದ್ರಕಲಾ‌ ಬಾಲಚಂದ್ರ ಉದ್ಘಾಟನೆ ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಜ್ಯೋತಿ ವಿದ್ಯಾ ಸಂಘದ ಅಧ್ಯಕ್ಷ ಜ್ಞಾನೇಶ್ ನಿಡ್ಯಮಲೆ, ಒಕ್ಕೂಟದ ಅಧ್ಯಕ್ಷೆ ಆಶಾ ಕೊಳಂಗಾಯ ಭಾಗವಹಿಸಿದ್ದರು.

ಪೌಷ್ಟಿಕ ಆಹಾಯ ಮತ್ತು ಆರೋಗ್ಯ ಕುರಿತು ಕುಂಡಾಡು ಅಂಗನವಾಡಿ ಕಾರ್ಯಕರ್ತೆ ಎನ್.ಎಸ್. ಸರೋಜ ಮಾಹಿತಿ ನೀಡಿದರು.

ರೈತ ಸಂಘದ ಸಂಚಾಲಕ ಉಮೇಶ್ ಕುಂಬಳಚೇರಿ, ಶಾಲಾ ಮುಖ್ಯ ಶಿಕ್ಷಕ ನಾಗರಾಜ ಮಾಸ್ತರ್, ರೈತ ಸಂಘದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಬಂಗಾರಕೋಡಿ ವೇದಿಕೆಯಲ್ಲಿ ಇದ್ದರು.

ಅಶೋಕ್ ಪೀಚೆ‌ಮನೆ ಸ್ವಾಗತಿಸಿದರು. ಗೋಪಾಲ‌ ಕೊಳಂಗಾಯ ಪ್ರಾಸ್ತಾವಿಕ ಮಾತನಾಡಿದರು. ಸಂಜೀವಿನಿ ಒಕ್ಕೂಟದ ಕನಕಾಂಬಿಕೆನಂದ ವಂದಿಸಿದರು. ಚಂದ್ರಮತಿ ಕುಂಬಳಚೇರಿ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಅಡುಗೆಗಳ ಪ್ರದರ್ಶನ ಮತ್ತು ಸೇವನೆ, ತೋಟದ ಬೆಳೆಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು.