ಕನ್ನಡ ಸೇವೆಗಾಗಿ ಡಾ. ದಾಮ್ಲೆ ದಂಪತಿಗಳಿಗೆ ಯೂನಿಯನ್ ಬ್ಯಾಂಕ್ ಕನ್ನಡ ಬಳಗದಿಂದ ಸನ್ಮಾನ

0

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕನ್ನಡ ಬಳಗ ಬೆಂಗಳೂರು ಹಾಗೂ ಮಂಗಳೂರು ಘಟಕಗಳ ಸಹಯೋಗದಲ್ಲಿ
ಬೇಂಕ್ ನ ಮುಖ್ಯ ಕಚೇರಿಯಲ್ಲಿ ರಂದು ನ.25ರಂದು ಸಮಾರಂಭದಲ್ಲಿ ಸುಳ್ಯದ ಡಾ. ಚಂದ್ರಶೇಖರ ದಾಮ್ಲೆಯವರ ಹಾಗೂ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಯವರ ಕನ್ನಡ ಸೇವೆಯನ್ನು ಗುರುತಿಸಿ ಸನ್ಮಾನಿಸಿದರು. ಖ್ಯಾತ ಪರಿಸರ ತಜ್ಞ ಡಾ. ಶಿವಾನಂದ ಕಳವೆ ಹಾಗೂ ಪ್ರಾದೇಶಿಕ ಕಚೇರಿಯ ಮುಖ್ಯಸ್ಥ ಮಹೇಶರವರು ಶಾಲು ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಿದರು.

      ಸನ್ಮಾನಕ್ಕೆ ಉತ್ತರಿಸಿದ ಡಾ. ದಾಮ್ಲೆಯವರು ಹಳ್ಳಿಯ ಮಟ್ಟದಲ್ಲಿ ಇರುವ ತಮ್ಮನ್ನು ನಗರಕ್ಕೆ ಕರೆದು ಗುರುತಿಸಿದ್ದಕ್ಕಾಗಿ ಸಂತೋಷ ವ್ಯಕ್ತಪಡಿಸಿದರು. ಕನ್ನಡದಲ್ಲಿ ಕಲಿತರೆ ಹಿನ್ನಡೆಯಿಲ್ಲ ಎಂಬುದು ನನ್ನ ಘೋಷಣೆ. ಇದಕ್ಕೆ ನಮ್ಮ ಸ್ನೇಹಶಾಲೆಯಲ್ಲಿ ಕಲಿತ ಹಿರಿಯ ವಿದ್ಯಾರ್ಥಿಗಳು ಸಾಕ್ಷಿಯಾಗಿದ್ದಾರೆ. ಮನೋವಿಜ್ಞಾನ, ಮಿಲಿಟರಿ, ವೈದ್ಯಕೀಯ, ಇಂಜಿನಿಯರಿಂಗ್, ಶಿಕ್ಷಕರು, ಸ್ವದ್ಯೋಗವಲ್ಲದೆ ಕೃಷಿಯಲ್ಲಿಯೂ ಯಶಸ್ವಿಯಾಗಿದ್ದಾರೆ. ಹಾಗಾಗಿ ಕನ್ನಡ ಶಾಲೆಗೆ ಮಕ್ಕಳನ್ನು ಸೇರಿಸಲು ಯಾರೂ ಹಿಂಜರಿಯಬೇಕಾಗಿಲ್ಲ ಎಂದರು.