ಗುತ್ತಿಗಾರು ಸೌಜನ್ಯ ಹೋರಾಟ ಸಮಿತಿ ವತಿಯಿಂದ ಡಿಸೆಂಬರ್ 6 ರಂದು ಸಂಜೆ 3 ಗಂಟೆಗೆ ಬೃಹತ್ ಪ್ರತಿಭಟನಾ ಸಭೆ ಗುತ್ತಿಗಾರಿನಲ್ಲಿ ನಡೆಯಲಿದೆ ಎಂದು ಹೋರಾಟ ಸಮಿತಿಯ ಪದಾಧಿಕಾರಿಗಳು ಡಿಸೆಂಬರ್ 7 ರಂದು ಸುಳ್ಯ ಪ್ಲಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿರುವ ಸಮಿತಿಯ ಪದಾಧಿಕಾರಿಗಳು ಸೌಜನ್ಯ ಪರ ನ್ಯಾಯಕ್ಕಾಗಿ ಕಳೆದ ಹಲವಾರು ಸಮಯಗಳಿಂದ ಹೋರಾಟಗಳನ್ನು ಮಾಡುತ್ತಾ ಬರುತ್ತಿದ್ದೇವೆ. ಅದೇ ರೀತಿ ಗುತ್ತಿಗಾರಿನಲ್ಲಿ ಸಮಾನ ಮನಸ್ಕರು ಸೇರಿ ಈ ಪ್ರತಿಭಟನೆ ಮಾಡುವ ನಿರ್ಣಯವನ್ನು ಕೈಗೊಂಡು ಈ ತೀರ್ಮಾನಕ್ಕೆ ಬಂದಿದ್ದೇವೆ. ಯಾರೇ ಆಗಿರಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಈ ಪ್ರತಿಭಟನೆ ವ್ಯಕ್ತಿಗತವಾಗಿ ಯಾರನ್ನು ಕೂಡ ದೂಷಿಸಿ ಮಾಡುವುದಲ್ಲ.ನಾವು ಮಾಡುವ ಈ ಆಂದೋಲನದಿಂದಾಗಿ ಸರ್ಕಾರ ಮತ್ತು ಸಂಬಂಧ ಪಟ್ಟ ಜನಪ್ರತಿನಿಧಿಗಳಿಗೆ, ಇಲಾಖೆಗಳಿಗೆ ನಮ್ಮ ಬೇಡಿಕೆಯ ಬಗ್ಗೆ ಮನವರಿಕೆಯಾಗಬೇಕು.
ಮುಂದಿನ ದಿನಗಳಲ್ಲಿ ಲೋಕಸಭಾ ಚುನಾವಣೆ ಇರುವ ಹಿನ್ನೆಲೆಯಲ್ಲಿ ಯಾವುದೇ ರಾಜಕೀಯ ಮುಖಂಡರುಗಳು ನಮ್ಮ ಈ ಹೋರಾಟಕ್ಕೆ ಬೆಂಬಲವನ್ನು ಕೊಡುತ್ತಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ನಾವು ಮತದಾನ ಬಹಿಷ್ಕಾರವನ್ನು ಕೂಡ ಮಾಡುವ ತೀರ್ಮಾನವನ್ನು ಕೈಗೊಳ್ಳಬೇಕಾಗುತ್ತದೆ ಎಂದು ಮುಖಂಡರಾದ ಪ್ರವೀಣ್ ಮುಂಡೋಡಿ ಹಾಗೂ ಚಂದ್ರಶೇಖರ ಬಾಳುಗೋಡು ಹೇಳಿದರು. ಪ್ರತಿಭಟನಾ ಸಭೆಯಲ್ಲಿ ಹೋರಾಟ ಸಮಿತಿಯ ಹಿರಿಯ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ,ನಿವೃತ್ತ ಪೋಲಿಸ್ ಅಧಿಕಾರಿ ಗಿರೀಶ್ ಮಟ್ಟಣ್ಣನವರ್, ಮುಖಂಡರುಗಳಾದ ತಮ್ಮಣ್ಣ ಶೆಟ್ಟಿ, ಪ್ರಸನ್ನ ರವಿ,ಸೌಜನ್ಯಳ ತಾಯಿ ಕುಸುಮಾವತಿ ಚಂದಪ್ಪ ಗೌಡ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಮುಖಂಡರುಗಳಾದ ವಿಜೇಶ್ ಹಿರಿಯಡ್ಕ, ಭರತ್ ಕನ್ನಡ್ಕ, ರಾಘವ ಗೌಡ ಆರ್ನೋಜಿ, ದುಶ್ಯಂತ್ ಶೀರಡ್ಕ, ಅರುಣ್ ತಿಪ್ಪಣ್ಣವರು ತಿಪ್ಪನ್ನೂರು, ಹರೀಶ್ ಎನ್ ಎಂ, ನೀಲಪ್ಪ ಪೈಕ, ಉಮೇಶ್ ಕಾಂತಿಲ ಉಪಸ್ಥಿತರಿದ್ದರು.