ಕಲ್ಲುಗುಂಡಿ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಹರಕೆಯ ಶ್ರೀ ವಿಷ್ಣುಮೂರ್ತಿ ದೈವದ ಬೈಲುಕೋಲ

0

ದ.ಕ. ಸಂಪಾಜೆ ಗ್ರಾಮದ ಕಲ್ಲುಗುಂಡಿ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಹರಕೆಯ ಶ್ರೀ ವಿಷ್ಣುಮೂರ್ತಿ ದೈವದ ಬೈಲುಕೋಲವು ಡಿ.9 ಹಾಗೂ 10ರಂದು ಜರುಗಿತು.

ಕಲ್ಲುಗುಂಡಿಯ ರಾಘವೇಂದ್ರ ಬೇಕರಿ ಮಾಲಕರಾದ ಸುನಿಲ್ ಮತ್ತು ಸಹೋದರರ ವತಿಯಿಂದ ಹರಕೆಯ ಬೈಲುಕೋಲದ ಪ್ರಯುಕ್ತ ಡಿ.9ರಂದು ರಾತ್ರಿ ಶ್ರೀ ದೈವದ ಭಂಡಾರ ತೆಗೆದು, ರಾತ್ರಿ ಶ್ರೀ ಮಹಾವಿಷ್ಣುಮೂರ್ತಿ ದೈವದ ಕುಳ್ಚಾಟ ನಡೆದು ಪ್ರಸಾದ ವಿತರಣೆಯಾಯಿತು.


ಡಿ.10ರಂದು ಬೆಳಿಗ್ಗೆ ಶ್ರೀ ಮಹಾವಿಷ್ಣುಮೂರ್ತಿ ದೈವದ ಬೈಲುಕೋಲ ಜರುಗಿ, ಪ್ರಸಾದ ವಿತರಣೆಯಾಯಿತು.

ಈ ಸಂದರ್ಭದಲ್ಲಿ ದೈವಸ್ಥಾನದ ಪದಾಧಿಕಾರಿಗಳು, ಭಕ್ತಾದಿಗಳು ಉಪಸ್ಥಿತರಿದ್ದರು.