ಡಿ.23 : ಬೆಳ್ಳಾರೆಯ ಉಜ್ರೋಳಿಯಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ದೀಪೋತ್ಸವ

0

ಬೆಳ್ಳಾರೆಯ ಉಜ್ರೋಳಿಯಲ್ಲಿ ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕನಾದ ಶ್ರೀ ಅಯ್ಯಪ್ಪ ಸ್ವಾಮಿಯ 9 ನೇ ವರ್ಷದ ದೀಪೋತ್ಸವವು ಡಿ.23 ರಂದು ನಡೆಯಲಿದೆ.

ಬೆಳಿಗ್ಗೆ ಗಂಟೆ 7.00 ಕ್ಕೆ ಸ್ಥಳ ಶುದ್ಧೀಕರಣ ಮತ್ತು ಗಣಹೋಮ ಸಂಜೆ ಗಂಟೆ 6.00 ಕ್ಕೆ ಪಾಲ್ ಕೊಂಬು ಮೆರವಣಿಗೆ ವಿವಿಧ ಚೆಂಡೆ ,ವಾದ್ಯ ,ಕುಣಿತ ಭಜನೆಯೊಂದಿಗೆ ಗೌರಿಹೊಳೆಯಿಂದ ಉಜ್ರೋಳಿವರೆಗೆ ನಡೆಯಲಿದೆ.

ರಾತ್ರಿ ಗಂಟೆ 8.00 ಕ್ಕೆ ಅಗ್ನಿಸ್ಪರ್ಶಿ ನಂತರ ಅಜಪಿಲ ಶ್ರೀ ಮಹಾಲಿಂಗೇಶ್ವರ ಮಹಿಳಾ ಭಜನಾ ಮಂಡಳಿ ಬೆಳ್ಳಾರೆ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

ರಾತ್ರಿ ಗಂಟೆ 9.00 ಕ್ಕೆ ಅನ್ನಸಂತರ್ಪಣೆ,ಬಳಿಕ ಭಕ್ತಿ ರಸಮಂಜರಿ ಗಂಟೆ 10.30 ಕ್ಕೆ ಅಪ್ಪ ಸೇವೆ ರಾತ್ರಿ ಗಂಟೆ 11.00 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ತುಳು ಯಕ್ಷಗಾನ ಬಯಲಾಟ “ಕಾರಿಂಜ ಕಾಂಜವೆ “ನಡೆಯಲಿದೆ. ಡಿ.24 ರಂದು ಬೆಳಿಗ್ಗೆ ಗಂಟೆ 4.00. ಕ್ಕೆ ಕೆಂಡ ಸೇವೆ ನಡೆಯಲಿದೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಗಂಧ,ಪ್ರಸಾದ ಸ್ವೀಕರಿಸಿ ಶ್ರೀ ಅಯ್ಯಪ್ಪ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಅಯ್ಯಪ್ಪ ಸೇವಾ ಸಮಿತಿ ಅಧ್ಯಕ್ಷ ಪ್ರಮೋದ್ ಶೆಟ್ಟಿ ಕುಂಟುಪುಣಿಗುತ್ತು ತಿಳಿಸಿದ್ದಾರೆ.